ರಾಷ್ಟ್ರೀಯ

ಸೆಕ್ಸ್ ಫೋಟೋ ನೋಡಿ ಹೆಂಡತಿಯ ಗುಂಡಿಕ್ಕಿ ಹತ್ಯೆ

Pinterest LinkedIn Tumblr


ನವದೆಹಲಿ: ಲಾಂಗ್ ಡ್ರೈವ್ ಕೆರದುಕೊಂಡು ಹೊಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತ್ನಿಯ ಮೊಬೈಲಿನಲ್ಲಿ ಸೆಕ್ಸ್ ಫೋಟೋ ನೋಡಿ ಪತಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬ ಸತ್ಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಲಾಂಗ್‍ ಡ್ರೈವ್ ಕರೆದುಕೊಂಡು ಹೋಗಿ ಪತ್ನಿ ನ್ಯಾನ್ಸಿ ಶರ್ಮಾಳನ್ನು ಕೊಲೆ ಮಾಡಿದ ಪತಿ ಸಾಹಿಲ್ ಚೋಪ್ರಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸಾಹಿಲ್ ಕೊಲೆ ಮಾಡಿದ ಕಾರಣವನ್ನು ತಿಳಿಸಿದ್ದಾನೆ.

ಮದುವೆಗೂ ಮೊದಲು ನ್ಯಾನ್ಸಿ ಹಾಗೂ ನಾನು ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿ ಇದ್ದೆವು. ಈ ವೇಳೆ ನ್ಯಾನ್ಸಿ ನನಗೆ ಆಕೆಯ ಸ್ನೇಹಿತರ ಬಗ್ಗೆ ಏನೂ ಹೇಳಿರಲಿಲ್ಲ. ಆಕೆ ಯಾವಾಗಲೂ ಫೋನಿನಲ್ಲಿ ಮಾತನಾಡುತ್ತಿದ್ದಳು. ಅಲ್ಲದೆ ಆಕೆಯ ಫೋನಿನಲ್ಲಿ ನಾನು ಸೆಕ್ಸ್ ಫೋಟೋಗಳನ್ನು ನೋಡಿದೆ. ಆಗ ನ್ಯಾನ್ಸಿ ನನಗೆ ಮೋಸ ಮಾಡುತ್ತಿದ್ದಾಳೆ ತಿಳಿಯಿತು. ಅಲ್ಲದೆ ಆಕೆಯ ಮೇಲೆ ಅನುಮಾನ ಮೂಡಲು ಶುರುವಾಯಿತು ಎಂದು ಪೊಲೀಸರ ಬಳಿ ಹೇಳಿದ್ದಾನೆ.

ಅಲ್ಲದೆ ನ್ಯಾನ್ಸಿ ತುಂಬಾ ದಿನ ಮನೆಯಲ್ಲಿ ಇರುತ್ತಿರಲಿಲ್ಲ. ಇದರಿಂದ ನನ್ನ ಅನುಮಾನ ಮತ್ತಷ್ಟು ಹೆಚ್ಚಾಯಿತು. ನ್ಯಾನ್ಸಿ ಯಾವಾಗಲೂ ನನ್ನ ಬಳಿ ಹಣ ಕೇಳುತ್ತಿದ್ದಳು. ಖರ್ಚು ಹೆಚ್ಚಾಗುತ್ತಿದ್ದಂತೆಯೇ ನನ್ನ ಸಂಪಾದನೆ ಕಡಿಮೆ ಆಗುತ್ತಿತ್ತು. ನನ್ನ ಕಾರಿನ ವ್ಯವಹಾರ ಕೂಡ ಚೆನ್ನಾಗಿ ನಡೆಯುತ್ತಿರಲಿಲ್ಲ. ಈ ಕಾರಣದಿಂದಾಗಿ ನಮ್ಮಿಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಜಗಳವಾಡುವ ವೇಳೆ ನ್ಯಾನ್ಸಿ ನನ್ನ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು ಎಂದು ಸಾಹಿಲ್ ತಿಳಿಸಿದ್ದಾನೆ.

ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ, ಎರಡೂವರೆ ವರ್ಷಗಳ ಹಿಂದೆ ದೆಹಲಿಯ ರೋಹಿಣಿಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಇಬ್ಬರು ಭೇಟಿಯಾಗಿದ್ದರು. ಆಗ ನ್ಯಾನ್ಸಿ ಅಲ್ಲಿ ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಸ್ನೇಹವಾಗಿ ಅದು ಪ್ರೀತಿಗೆ ತಿರುಗಿತು. ಬಳಿಕ ನ್ಯಾನ್ಸಿ ತನ್ನ ಕುಟುಂಬಸ್ಥರನ್ನು ಬಿಟ್ಟು ಸಾಹಿಲ್ ಜೊತೆ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದಳು. ಮದುವೆಯಾಗುವಂತೆ ಇಬ್ಬರ ಕುಟುಂಬಸ್ಥರು ಒತ್ತಾಯಿಸಿದಕ್ಕೆ ಮಾರ್ಚ್ 27ರಂದು ಇಬ್ಬರು ವಿವಾಹವಾಗಿದ್ದರು.

ಮದುವೆಯಾದ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಜಗಳ ಹೆಚ್ಚಾಗಿ ನ್ಯಾನ್ಸಿ ಹಾಗೂ ಸಾಹಿಲ್ ಬೇರೆ ಬೇರೆ ವಾಸಿಸುತ್ತಿದ್ದರು. ಸಾಹಿಲ್, ನ್ಯಾನ್ಸಿ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಇದಲ್ಲದೇ ನ್ಯಾನ್ಸಿಗೆ ಹಣ ಹೆಚ್ಚು ಖರ್ಚು ಮಾಡುವ ಅಭ್ಯಾಸವಿತ್ತು. ಇದರಿಂದ ಬೇಸರಗೊಂಡ ಸಾಹಿಲ್ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. ನ್ಯಾನ್ಸಿ ಬಳಿ ಆಕೆಯ ಸ್ನೇಹಿತರು ಉಡುಗೊರೆಯಾಗಿ ನೀಡಿದ ಅಕ್ರಮ ಪಿಸ್ತೂಲ್ ಇತ್ತು. ಆ ಪಿಸ್ತೂಲ್ ಅನ್ನು ಸಾಹಿಲ್ ತೆಗೆದುಕೊಂಡನು.

ನ. 11ರಂದು ಲಾಂಗ್ ಡ್ರೈವ್ ಹೋಗುವುದಾಗಿ ಹೇಳಿ ಸಾಹಿಲ್ ನ್ಯಾನ್ಸಿಯನ್ನು ಪಾನಿಪತ್‍ಗೆ ಕರೆದುಕೊಂಡು ಹೋಗಿದ್ದನು. ಪಾನಿಪತ್‍ಗೆ ತಲುಪಿದಾಗ ನ್ಯಾನ್ಸಿ ಕಾರ್ ನಿಲ್ಲಿಸಲು ಹೇಳಿದ್ದಳು. ಆಗ ಸಾಹಿಲ್ ಸಾರ್ವಜನಿಕ ಶೌಚಾಲಯದ ಬಳಿ ಕಾರು ನಿಲ್ಲಿಸಿದ್ದನು. ಅದು ನಿರ್ಜನ ಪ್ರದೇಶ ಆಗಿದ್ದ ಕಾರಣ ಸಾಹಿಲ್ ಅಲ್ಲಿಯೇ ನ್ಯಾನ್ಸಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ನ್ಯಾನ್ಸಿ ಮೃತಪಟ್ಟ ನಂತರ ಆಕೆಯ ಮೃತದೇಹವನ್ನು ಪೊದೆಯೊಳಗೆ ಎಸೆದು ಸಾಹಿಲ್ ಮನೆಗೆ ಹಿಂದಿರುಗಿದ್ದಾನೆ.

ನ್ಯಾನ್ಸಿ ತಂದೆ ಸಂಜಯ್ ಶರ್ಮಾ ತಮ್ಮ ಮಗಳಿಗೆ ಹಲವು ಬಾರಿ ಕರೆ ಮಾಡಿದ್ದರು. ಆದರೆ ಕರೆ ಮಾಡಿದಾಗ ಕಾಲ್ ಕಟ್ ಮಾಡಲಾಗುತ್ತಿತ್ತು. ಸಂಜಯ್ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಲು ಶುರು ಮಾಡಿದ್ದರು. ಮಗಳು ಎಲ್ಲಿಯೂ ಸಿಗದಿದ್ದಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಸಾಹಿಲ್, ನ್ಯಾನ್ಸಿ ಬೇರೊಬ್ಬ ವ್ಯಕ್ತಿ ಜೊತೆ ಮನೆಯಿಂದ ಓಡಿ ಹೋಗಿರಬಹುದು ಎಂದು ಸುಳ್ಳು ಕತೆಯನ್ನು ಸೃಷ್ಟಿಸಿದ್ದನು.

ನ. 26ರಂದು ಪೊಲೀಸರು ನ್ಯಾನ್ಸಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಬಳಿಕ ಅವರು ನ್ಯಾನ್ಸಿ ಕಾಣೆಯಾದ ದಿನ ಸಾಹಿಲ್ ಫೋನ್ ಲೋಕೇಶನ್ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸಿದ್ದರು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು. ಇದೇ ವೇಳೆ ಪತ್ನಿಯನ್ನು ಕೊಲೆ ಮಾಡಿದ್ದು ಯಾಕೆ ಎಂಬುದನ್ನು ಸಾಹಿಲ್ ಪೊಲೀಸರ ಬಳಿ ತಿಳಿಸಿದ್ದಾನೆ.

Comments are closed.