ರಾಷ್ಟ್ರೀಯ

ಮತದಾನ ಆರಂಭವಾಗುತ್ತಿದ್ದಂತೆ ಸೇತುವೆಯೊಂದನ್ನು ಸ್ಫೋಟಿಸಿದ ನಕ್ಸಲರು.

Pinterest LinkedIn Tumblr

ರಾಂಚಿ:  ಝಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ಆರಂಭವಾಗುತ್ತಿದ್ದಂತೆ ಇಲ್ಲಿನ ಬಿಷ್ಣು ಪುರ ದಲ್ಲಿ ಸೇತುವೆಯೊಂದನ್ನು ನಕ್ಸಲರು ಸ್ಫೋಟಿಸಿದ ಘಟನೆ ವರದಿಯಾಗಿದೆ.

ಘಟನೆಯಿಂದ ಯಾವುದೇ ರೀತಿಯ ಸಾವುನೋವು ಸಂಭವಿಸಿಲ್ಲ ಎಂದು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಶಶಿ ರಂಜನ್ ಅವರು “ಮತ ದಾನದ ಮೇಲೆ ಈ ಘಟನೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಹೇಳಿದ್ದಾರೆ.

ಜಾರ್ಖಂಡ್‌ನ ಆರು ಜಿಲ್ಲೆಗಳ 13 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ ಆರಂಭವಾಗಿದೆ.

ಮತದಾನ ನಡೆಯುತ್ತಿರುವ ಕ್ಷೇತ್ರಗಳು – ಚತ್ರ, ಗುಮ್ಲಾ, ಬಿಶುನ್‌ಪುರ, ಲೋಹರ್‌ದಾಗ, ಮಾನಿಕಾ, ಲತೇಹರ್, ಪಂಕಿ, ಡಾಲ್ಟೋಂಗಂ ಜ್ , ಬಿಶ್ರಾಂಪುರ್, ಚತ್ತಾರ್ ಪುರ, ಹುಸೇನಾಬಾದ್, ಗರ್ಹ್ವಾ ಮತ್ತು ಭಾವನಾಥಪುರ.

ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 15 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 189 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರ ಭವಿಷ್ಯವನ್ನು 37 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ ಎಂದು ಜಾರ್ಖಂಡ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವಿನಯ್ ಕುಮಾರ್ ಚೌಬೆ ಶುಕ್ರವಾರ ತಿಳಿಸಿದ್ದಾರೆ.

Comments are closed.