ರಾಷ್ಟ್ರೀಯ

ಪ್ರಿಯತಮೆಗೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

Pinterest LinkedIn Tumblr

ಪಾಟ್ನಾದ ಶಾಸ್ತ್ರಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರೇಮಿಯೊಬ್ಬ ಪ್ರಿಯತಮೆಗೆ ಗುಂಡು ಹಾರಿಸಿ ನಂತ್ರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ನಿಧಿ ಎಲ್.ಎನ್. ಮಿಶ್ರಾ ಇನ್ಸ್ಟಿಟ್ಯೂಟ್ ನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಳು. ಚೇತನ್ ಕೂಡ ನಿಧಿ ಊರಿನವನಾಗಿದ್ದ. ಕೆಲ ತಿಂಗಳ ಹಿಂದೆ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಇತ್ತೀಚಿಗೆ ಇಬ್ಬರ ಮಧ್ಯೆ ಸಂಬಂಧ ಸರಿಯಿರಲಿಲ್ಲ. ಗುರುವಾರ ರಾತ್ರಿ ಇಬ್ಬರ ಮಧ್ಯೆ ಜಗಳ ನಡೆದಿದೆ.

ಶುಕ್ರವಾರ ಬೆಳಿಗ್ಗೆ ನಿಧಿ ಮನೆಗೆ ಚೇತನ್ ಬಂದಿದ್ದಾನೆ. ಚೇತನ್ ಬಗ್ಗೆ ನಿಧಿ ಸಹೋದರಿಗೆ ಗೊತ್ತಿರಲಿಲ್ಲ. ಚೇತನ್ ಕಸ ತರುವಂತೆ ಹೇಳಿದ್ದಾನೆ. ಸಹೋದರಿ ಕಸ ತರಲು ಒಳಗೆ ಹೋಗಿದ್ದಾಳೆ. ಈ ವೇಳೆ ನಿಧಿ ಮಲಗಿದ್ದ ಜಾಗಕ್ಕೆ ಹೋದ ಚೇತನ್ ಆಕೆಗೆ ಗುಂಡು ಹಾರಿಸಿ ತಾನೂ ಗುಂಡು ಹಾರಿಸಿಕೊಂಡಿದ್ದಾನೆ.

Comments are closed.