ರಾಷ್ಟ್ರೀಯ

ಮಹಾರಾಷ್ಟ್ರದಂತೆ ಗೋವಾದಲ್ಲಿ ಪವಾಡ ನೋಡಲಿದ್ದೀರಿ- ಸಂಜಯ್ ರೌತ್

Pinterest LinkedIn Tumblr


ನವದೆಹಲಿ: ಮಹಾರಾಷ್ಟ್ರದ ನಂತರ ಗೋವಾದಲ್ಲಿ ಪವಾಡ ಕಾಣಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಶುಕ್ರವಾರ ಘೋಷಿಸಿದರು, ಅವರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

2017 ರಲ್ಲಿ ಗೋವಾದಲ್ಲಿ ಅತಂತ್ರ ಫಲಿತಾಂಶ ಬಂದಾಗಿನಿಂದಲೂ ಅಲ್ಲಿ ರಾಜಕೀಯ ಪ್ರಕ್ಷುಬ್ದತೆ ಹಲವು ಲೆಕ್ಕಾಚಾರವನ್ನು ಕಂಡಿದೆ. ಈಗ ಕಾಂಗ್ರೆಸ್-ಶಿವಸೇನಾ-ಎನ್ಸಿಪಿ ಮೈತ್ರಿಕೂಟದ ಸರ್ಕಾರ ರಚನೆ ನಂತರ ಸಂಜಯ್ ರೌತ್ ಗೋವಾದಲ್ಲಿಯೂ ಹೊಸ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.ಗೋವಾ ಫಾರ್ವರ್ಡ್ ಪಕ್ಷದ ಮಾಜಿ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ರೌತ್ ಹೇಳಿದ್ದಾರೆ.

‘ಮಹಾರಾಷ್ಟ್ರದಲ್ಲಿ ನಡೆದಂತೆಯೇ ಗೋವಾದಲ್ಲಿ ಹೊಸ ರಾಜಕೀಯ ಮೈತ್ರಿಕೂಟ ರೂಪುಗೊಳ್ಳುತ್ತಿದೆ. ಶೀಘ್ರದಲ್ಲೇ ನೀವು ಗೋವಾದಲ್ಲಿ ಒಂದು ಪವಾಡಕ್ಕೆ ಸಾಕ್ಷಿಯಾಗುತ್ತೀರಿ, ಇದು ದೇಶಾದ್ಯಂತ ನಡೆಯಲಿದೆ. ಮಹಾರಾಷ್ಟ್ರದ ನಂತರ ಅದು ಗೋವಾ, ನಂತರ ನಾವು ಇತರ ರಾಜ್ಯಗಳಿಗೆ ಹೋಗುತ್ತೇವೆ. ಈ ದೇಶದಲ್ಲಿ ಬಿಜೆಪಿಯೇತರ ರಾಜಕೀಯ ಶಕ್ತಿಯನ್ನು ಬಯಸುತ್ತೇವೆ” ಎಂದು ಹೇಳಿದರು.

ಇದೇ ವೇಳೆ ವಿಜಯ್ ಸರ್ದೇಸಾಯಿ ಅವರು ಸಂಜಯ್ ರೌತ್ ಅವರನ್ನು ಭೇಟಿ ಮಾಡಿರುವುದನ್ನು ಧೃಡಪಡಿಸಿದರು. ‘ಘೋಷಣೆ ನಂತರ ಸರ್ಕಾರಗಳು ಬದಲಾಗುವುದಿಲ್ಲ. ಅದು ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಮಹಾರಾಷ್ಟ್ರದಲ್ಲಿ ಏನಾಗಿದೆಯೋ, ಅದು ಗೋವಾದಲ್ಲಿಯೂ ಆಗಬೇಕು. ಪ್ರತಿಪಕ್ಷಗಳು ಒಗ್ಗೂಡಬೇಕು. ನಾವು ಸಂಜಯ್ ರೌತ್ ಅವರನ್ನು ಭೇಟಿ ಮಾಡಿದ್ದೇವೆ. ‘ಮಹಾ ವಿಕಾಸ್ ಅಘಾಡಿ’ ಗೋವಾದಲ್ಲಿಯೂ ರಚನೆಯಾಗಬೇಕು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಗೋವಾ ಫಾರ್ವರ್ಡ್ ಪಕ್ಷ ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಿತು.

Comments are closed.