(file photo)
ಹರಿದ್ವಾರ : ಗುರುತಿನ ಚೀಟಿ ನೀಡದಿರುವುದಕ್ಕೆ ಸಿಟ್ಟಾದ ವ್ಯಕ್ತಿಯೊಬ್ಬ ರೈಲು ಬೋಗಿಗೆ ಬೆಂಕಿಯಿಟ್ಟ ಘಟನೆ ಹರಿದ್ವಾರದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಗುರುವಾರ ಈ ಪ್ರಕರಣ ನಡೆದಿದ್ದು, ರಿಷಿಕೇಶ್-ದೆಹಲಿ ಪ್ಯಾಸೆಂಜರ್ ರೈಲಿನ ಬೋಗಿ ಬೆಂಕಿಗಾಹುತಿಯಾಗಿದೆ.
ನನ್ನ ಗುರುತಿನ ಚೀಟಿ ನೀಡಲು ನಿರಾಕರಿಸಿದ್ದರಿಂದ ಬೋಗಿಗೆ ಬೆಂಕಿ ಹಂಚಿದ್ದೇನೆ ಮತ್ತು ಸೀಟ್ ಕವರ್‌ಗಳನ್ನು ಹರಿದುಹಾಕಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.
ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ.
Comments are closed.