ರಾಷ್ಟ್ರೀಯ

ಪುತ್ರ ತಲಾಖ್ ನೀಡಿದ ನಂತರ ಸೊಸೆ ಮೇಲೆ ಮಾವ ಅತ್ಯಾಚಾರ!

Pinterest LinkedIn Tumblr


ರಾಜಸ್ಥಾನ್: ಮಗ ಪತ್ನಿಗೆ ತಲಾಖ್ ನೀಡಿದ ಬಳಿಕ ಮಾವ ಹಾಗೂ ಇನ್ನಿಬ್ಬರು ಜತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಅಲ್ವಾರ್ ನ ಭಿವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

2015ರಲ್ಲಿ ಈಕೆ ಭಿವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚೌಪಂಕಿಯ ಯುವಕನ ಜತೆ ವಿವಾಹವಾಗಿದ್ದಳು. ಅಲ್ಲದೇ ಇಸ್ಲಾಂ ಸಂಪ್ರದಾಯದಂತೆ ನನ್ನ ತಂದೆ ವರದಕ್ಷಿಣೆ ಕೂಡಾ ನೀಡಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಆದರೆ ಮತ್ತಷ್ಟು ವರದಕ್ಷಿಣೆ ತರುವಂತೆ ಗಂಡ, ಮಾವ ಹಾಗೂ ಭಾವ ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎಂದು ದೂರಿದ್ದಾರೆ. ಕೋಣೆಯೊಳಗೆ ಕೂಡಿ ಹಾಕಿ ಥಳಿಸುತ್ತಿದ್ದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ನವೆಂಬರ್ 22ರಂದು ಕೋಣೆಗೆ ಬಂದಿದ್ದ ಪತಿ, ತ್ರಿವಳಿ ತಲಾಖ್ ನೀಡಿರುವುದಾಗಿ ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ.

ಅಂದು ಮಧ್ಯರಾತ್ರಿ 12ಗಂಟೆಗೆ ಮಾವ ಹಾಗೂ ಇಬ್ಬರು ವ್ಯಕ್ತಿಗಳು ಕೋಣೆಯೊಳಗೆ ಬಂದು, ನನ್ನ ಮಗ ನಿನಗೆ ವಿಚ್ಛೇದನ ನೀಡಿದ್ದಾನೆ. ಹೀಗಾಗಿ ನೀನು ನನ್ನ ಸೊಸೆಯಲ್ಲ ಎಂದು ತಿಳಿಸಿ, ಪಿಸ್ತೂಲ್ ಅನ್ನು ಹಣೆಗಿಟ್ಟು ಹೆದರಿಸಿ, ಮಾವ ಹಾಗೂ ಇನ್ನಿಬ್ಬರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ತಂದೆ ದೂರಿದ್ದಾರೆ.

ಮರುದಿನ ಮಗಳು ತಂದೆಗೆ ರಾತ್ರಿ ನಡೆದ ಘಟನೆ ವಿವರಿಸಿದ್ದು, ನಂತರ ಪತಿ, ಮಾವ ಹಾಗೂ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

Comments are closed.