ನವದೆಹಲಿ : ಆಯೋಧ್ಯೆ ವಿವಾದ ಕುರಿತು ಸಾಂವಿಧಾನಿಕ ಪೀಠ ನೀಡಿದ ಮಹತ್ವದ ತೀರ್ಪು ಹಿನ್ನೆಲೆಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಪುನರ್ ವಿಮರ್ಶಾ ಮೇಲ್ಮನವಿ ಸಲ್ಲಿಸಲು ಪ್ರಮುಖ ಮುಸ್ಲಿಂ ಸಂಘಟನೆಗಳು ನಿರ್ಧರಿಸಿವೆ.
ಈ ಹಿಂದೆಯೇ, ಸುನ್ನಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನೆ ಮಾಡುವುದಿಲ್ಲ. ವಿವಾದ ಇಷ್ಟಕ್ಕೆ ಬಗೆಹರಿಯಲಿ ಎಂದು ಹೇಳಿತ್ತು. ಆದರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪುನರ್ ವಿಮರ್ಶಾ ಮೇಲ್ಮನವಿ ಸಲ್ಲಿಸಲೇ ಬೇಕೆಂದು ಪಟ್ಟು ಹಿಡಿದಿದೆ. ಅಲ್ಲದೇ, ಪುನರ್ ವಿಮರ್ಶಾ ಅರ್ಜಿ ಸಲ್ಲಿಕೆ ಸಂವಿಧಾನದತ್ತ ಅಧಿಕಾರ ಎಂದು ಪ್ರತಿಪಾದಿಸಿದೆ.
ಸುಪ್ರೀಂಕೋರ್ಟ್ ಪುನರ್ ವಿಮರ್ಶಾ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನಾವು ಡಿಸೆಂಬರ್ ಮೊದಲ ವಾರದಲ್ಲಿ ಪುನರ್ ವಿಮರ್ಶಾ ಅರ್ಜಿ ಸಲ್ಲಿಸುತ್ತೇವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟಪಡಿಸಿದೆ. ಅಲ್ಲದೇ, ಸುನ್ನಿ ವಕ್ಫ್ ಬೋರ್ಡ್ ವಿರೋಧ ಕಾನೂನಾತ್ಮಕವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಸುನ್ನಿ ವಕ್ಫ್ ಬೋರ್ಡ್ ಹೊರತುಪಡಿಸಿ ಇತರೇ ಮುಸ್ಲಿಂ ಸಂಘಟನೆಗಳೂ ನಮ್ಮ ಬೆಂಬಲಕ್ಕಿವೆ ಎಂತಲೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟವಾಗಿ ತಿಳಿಸಿದೆ.

Comments are closed.