ರಾಷ್ಟ್ರೀಯ

ಶಬರಿಮಲೆ ಪ್ರವೇಶಕ್ಕೆ ಬಂದಿದ್ದ ಮಹಿಳಾ ಹೋರಾಟಗಾರ್ತಿ ಬಿಂದು ಅಮ್ಮಿನಿ ಮೇಲೆ ಪೆಪ್ಪರ್ ಸ್ಪ್ರೇ

Pinterest LinkedIn Tumblr


ಎರ್ನಾಕುಲಂ: ಮಹಿಳಾ ಹೋರಾಟಗಾರ್ತಿ, ಕಳೆದ ಜನವರಿಯಲ್ಲಿ ಶಬರಿಮಲೆಗೆ ಪ್ರವೇಶ ಮಾಡಿದ್ದ ಬಿಂದು ಅಮ್ಮಿನಿ ಮೇಲೆ ಪೆಪ್ಪರ್ ಸ್ಪ್ರೇ ದಾಳಿಯಾಗಿದೆ.

ಮಂಗಳವಾರ ಶಬರಿಮಲೆ ಪ್ರವೇಶಕ್ಕಾಗಿ ಬಂದಿದ್ದ ಬಿಂದು ಮೇಲೆ ವ್ಯಕ್ತಿಯೋರ್ವ ಕರಿಮೆಣಸಿನ ಪುಡಿಯನ್ನು ಸ್ಪ್ರೇ ಮಾಡಿದ್ದಾನೆ.

ಮಾಧ್ಯಮದೊಂದಿಗೆ ಮಾತನಾಡಿದ ಬಿಂದು, ಇಂದು ಮುಂಜಾನೆ ಎರ್ನಾಕುಲಂ ಪೊಲೀಸ್ ಕಮಿಷನರ್ ಆಫೀಸ್ ನ ಹೊರಗಡೆ ವ್ಯಕ್ತಿಯೋರ್ವ ನನ್ನ ಮೇಲೆ ದಾಳಿ ಮಾಡಿದ್ದಾನೆ ಎಂದಿದ್ದಾರೆ.

ಇದೀಗ ಬಿಂದು ಮೇಲೆ ಪೆಪ್ಪರ್ ಸ್ಪ್ರೇ ಮಾಡಿರುವ ವಿಡಿಯೋ ಹೊರಬಿದ್ದಿದೆ.

10 ರಿಂದ 50 ವರ್ಷದೊಳಗಿನ ನಡುವಿನ ಮಹಿಳೆಯರು ಶಬರಿ ಮಲೆ ದೇವಸ್ಥಾನ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಕಳೆದ ವರ್ಷ ನಡೆದಿದ್ದ ಗಲಾಟೆಗಳ ಕಾರಣದಿಂದ ಈ ಬಾರಿ ಕೇರಳ ಸರಕಾರ ಮಹಿಳೆಯ ಪ್ರವೇಶವನ್ನು ಪ್ರೋತ್ಸಾಹಿಸುತ್ತಿಲ್ಲ.

Comments are closed.