ರಾಷ್ಟ್ರೀಯ

ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್‌ ಫಿಶರ್ ಹೌಸ್ ಆನ್‌ಲೈನ್‌ ಮುಖಾಂತರ ನಾಳೆ ಹರಾಜು

Pinterest LinkedIn Tumblr

ಭಾರತೀಯ ಬ್ಯಾಂಕ್ ನಲ್ಲಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್‌ ಫಿಶರ್ ಹೌಸ್ ಹರಾಜು ನಾಳೆ ನಡೆಯಲಿದೆ.

ಮೂರು ವರ್ಷಗಳಲ್ಲಿ 8 ನೇ ಬಾರಿಗೆ ಮತ್ತೆ ಹರಾಜು ನಡೆಯಲಿದೆ. ಕಿಂಗ್‌ಫಿಶರ್ ಹೌಸ್ ನಿಷ್ಕ್ರಿಯ ಕಿಂಗ್‌ ಫಿಶರ್ ಏರ್‌ಲೈನ್ಸ್ ಲಿಮಿಟೆಡ್ ಪ್ರಧಾನ ಕಚೇರಿಯಾಗಿದೆ. ಈ ಆಸ್ತಿಯನ್ನು ಆನ್‌ಲೈನ್‌ನಲ್ಲಿ ನವೆಂಬರ್ 27 ರಂದು ಹರಾಜು ಮಾಡಲಾಗುತ್ತದೆ.

135 ಕೋಟಿ ರೂಪಾಯಿಗಳ ಮೀಸಲು ಬೆಲೆಯೊಂದಿಗೆ ಮೊದಲ ಬಾರಿ ಹರಾಜು ಪ್ರಾರಂಭವಾಗಿತ್ತು. 2016 ರಲ್ಲಿ ಇದರ ಮೌಲ್ಯ ಸುಮಾರು 150 ಕೋಟಿ ರೂಪಾಯಿಯಾಗಿತ್ತು. 8 ನೇ ಹರಾಜಿನಲ್ಲಿ ಮೀಸಲು ಬೆಲೆಯನ್ನು 54 ಕೋಟಿ ರೂಪಾಯಿಗಿಂತ ಕಡಿಮೆ ನಿಗದಿಪಡಿಸಲಾಗಿದ್ದು, ಆಸ್ತಿ ಶೇಕಡಾ 60 ರಷ್ಟು ಕುಸಿತ ಕಂಡಿದೆ.

ಆರಂಭದಲ್ಲಿ ಇದನ್ನು ಪ್ಯಾರಡಿಗಮ್ ಎಂದು ಕರೆಯಲಾಗುತ್ತಿತ್ತು. ನಂತ್ರ ಕಿಂಗ್ ಫಿಶರ್ ಹೌಸ್ ಆಗಿ ಮಾರ್ಪಟ್ಟಿತು. ಇದು 1,586 ಚದರ ಮೀಟರ್ ಇದೆ. ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇದು 2,402 ಚದರ ಮೀಟರ್ ದೂರದಲ್ಲಿದೆ.

Comments are closed.