ರಾಷ್ಟ್ರೀಯ

2 ಮೊಬೈಲಲ್ಲಿ ಒಂದೇ ವಾಟ್ಸ್‌ಆ್ಯಪ್‌

Pinterest LinkedIn Tumblr


ಹೊಸದಿಲ್ಲಿ: ಅತ್ಯಂತ ಬಳಕೆಯಲ್ಲಿರುವ ಸಂದೇಶ ರವಾನೆ ತಾಣ ವಾಟ್ಸ್‌ಆ್ಯಪ್‌, ಸತತ ವಾಗಿ ಹೊಸ ಹೊಸ ಸಾಧ್ಯತೆಯನ್ನು ಸೇರಿಸುತ್ತಲೇ ಇರುತ್ತದೆ. ಇದೀಗ ಅತ್ಯಂತ ಕುತೂಹಲಕರ ಅವಕಾಶಗಳನ್ನು ಬಳಕೆದಾರರಿಗೆ ನೀಡಲು ಸಿದ್ಧವಾಗಿದೆ ಅದರ ಮಾಹಿತಿ ಇಲ್ಲಿದೆ.

ಎರಡು ಮೊಬೈಲ್‌ಗ‌ಳಲ್ಲಿ ಒಂದೇ ಖಾತೆ ಬಳಕೆ: ವಾಟ್ಸ್‌ಆ್ಯಪ್‌ ಪ್ರಸ್ತುತ ಸಿದ್ಧಪಡಿಸುತ್ತಿರುವ ಪ್ರಮುಖ ಬದಲಾವಣೆ, 2 ಮೊಬೈಲ್‌ಗ‌ಳಲ್ಲಿ ಒಂದೇ ವಾಟ್ಸ್‌ಆ್ಯಪ್‌ ಖಾತೆ ಬಳಸುವುದು. ಇದಕ್ಕಾಗಿ ನೋಟಿಫಿಕೇಶನ್‌ ರಿಜಿಸ್ಟ್ರೇಶನ್‌ ಎಂಬ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ.

ಒಮ್ಮೆ ಮೂಲ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್‌ ತೆರೆದು, ಇನ್ನೊಂದು ಮೊಬೈಲ್‌ ಬಗ್ಗೆ ಬರುವ ಸೂಚನೆಯನ್ನು ಹೌದು ಎಂದು ಖಚಿತ ಪಡಿಸಬೇಕು. ಭದ್ರತಾ ಸಂಕೇತ (ಸೆಕ್ಯುರಿಟಿ ಕೋಡ್‌) ಖಚಿತಪಡಿಸಿದ ಅನಂತರ ಇನ್ನೊಂದು ಮೊಬೈಲ್‌ನಲ್ಲಿ ಬಳಕೆ ಆರಂಭಿಸಬಹುದು.

ಡಾರ್ಕ್‌ ಮೋಡ್‌ ವ್ಯವಸ್ಥೆ: ರಾತ್ರಿ ವೇಳೆ ಮೊಬೈಲ್‌ ಬಳಸುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಾಟ್ಸ್‌ಆ್ಯಪ್‌ ಡಾರ್ಕ್‌ ಮೋಡ್‌ ಅವಕಾಶ ನೀಡಲಿದೆ. ಇದರಿಂದ ರಾತ್ರಿಯ ಮಂದಬೆಳಕಿನಲ್ಲಿ ಅಕ್ಷರಗಳು ಸ್ಪಷ್ಟವಾಗಿ ಕಾಣಲಿವೆ. ಇದಕ್ಕೆ ಅಕ್ಷರಗಳ ಹಿಂಭಾಗದಲ್ಲಿರುವ ಸ್ಕ್ರೀನ್‌ ಸಹಜವಾಗಿ ಕಪ್ಪು ಬಣ್ಣಕ್ಕೆ ತಿರುಗುವುದು ಕಾರಣ.

ನೆಟ್‌ಫ್ಲಿಕ್ಸ್‌ ವಿಡಿಯೋ: ಇತ್ತೀಚೆಗೆ ವಾಟ್ಸ್‌ ಆ್ಯಪ್‌ನಲ್ಲಿ ಯೂಟ್ಯೂಬ್‌ ವಿಡಿಯೊ ಬಂದರೆ, ಪರದೆಯೊಳಗೇ ನೋಡುವ ವ್ಯವಸ್ಥೆ ಮಾಡಲಾಗಿದೆ (ಪ್ರತ್ಯೇಕವಾಗಿ ಯೂಟ್ಯೂಬ್‌ ಲಿಂಕ್‌ ತೆರೆದುಕೊಳ್ಳುವ ಅಗತ್ಯವಿಲ್ಲ). ಅಂತಹದ್ದೇ ಒಂದು ವ್ಯವಸ್ಥೆಯನ್ನು ನೆಟ್‌ಫ್ಲಿಕ್ಸ್‌ಗಾಗಿಯೂ ಸಿದ್ಧಪಡಿಸಲಾಗಿದೆ. ನೆಟ್‌ಫ್ಲಿಕ್ಸ್‌ ವಿಡಿಯೊಗಳನ್ನು ಹೀಗೆಯೇ ವೀಕ್ಷಿಸಬಹುದಾಗಿದೆ.

ಬೆರಳಚ್ಚಿನ ರಕ್ಷಣಾ ವ್ಯವಸ್ಥೆ: ಈವರೆಗೆ ಐಫೋನ್‌ ಬಳಕೆದಾರರಿಗೆ ಬೆರಳಚ್ಚು ಬಳಸಿ ವಾಟ್ಸ್‌ಆ್ಯಪ್‌ ಅನ್ನು ರಕ್ಷಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆ ಅವಕಾಶವನ್ನು ಇತರೆ ಮೊಬೈಲ್‌ಗ‌ಳಿಗೂ ವಿಸ್ತರಿಸಲಾಗಿದೆ. ಹಾಗಿದ್ದರೂ ವಾಟ್ಸ್‌ಆ್ಯಪ್‌ ಮೂಲಕ ಬರುವ ಕರೆಗಳಿಗೆ ಬೆರಳಚ್ಚು ಬಳಸದೇ ಉತ್ತರಿಸಲೂ ಅವಕಾಶವಿದೆ.

Comments are closed.