ರಾಷ್ಟ್ರೀಯ

ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದ ಸುಪ್ರಿಂಕೋರ್ಟ್‌ನಿಂದ ಇಂದು ಅಂತಿಮ ವಿಚಾರಣೆ

Pinterest LinkedIn Tumblr

ಹೊಸದಿಲ್ಲಿ: ಸರಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡಿದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಮೆಟ್ಟಿಲೇರಿದ್ದವು.

ಕಳೆದೊಂದು ತಿಂಗಳಿಂದ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿ ರವಿವಾರ ವಿಶೇಷ ವಿಚಾರಣೆ ನಡೆಸಿದ್ದ ಪೀಠ, ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಬೆಳಿಗ್ಗೆ 10.30ಕ್ಕೆ ಮುಂದೂಡಿದೆ.

ನ್ಯಾ. ಎನ್ ವಿ ರಮಣ, ನ್ಯಾ. ಅಶೋಕ್ ಭೂಷಣ್, ನ್ಯಾ. ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ, ಬಿಜೆಪಿ ನೇತೃತ್ವದ ಪೀಠ ಯಾವಾಗ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಇಂದು ಪ್ರಕಟಿಸಲಿದೆ.

Comments are closed.