
ಟಿಕ್ಟಾಕ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ!. ವಿಡಿಯೋ ಶೇರಿಂಗ್ ಆ್ಯಪ್ ಟಿಕ್ಟಾಕ್ ಸಾಕಷ್ಟು ಬಳಕೆದಾರನ್ನು ಒಳಗೊಂಡಿದ್ದು, ಇದೀಗ ಬಳಕೆದಾರರಿಗೆ ಹಣ ಮಾಡುವ ಮಾರ್ಗವೊಂದನ್ನು ತಿಳಿಸಿದೆ.
ದೇಶದಾದ್ಯಂತ ಕೊಟ್ಯಾಂತರ ಬಳಕೆದಾರರು ಟಿಕ್ಟಾಕ್ ಬಳಸುತ್ತಿದ್ದಾರೆ. ಮಾತ್ರವಲ್ಲದೆ, ವಿಡಿಯೋಗಳನ್ನು ಅದರಲ್ಲಿ ಹರಿಬಿಡುತ್ತಿದ್ದಾರೆ. ದಿನೇ ದಿನೇ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೀಗ ತನ್ನ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
ಅನೇಕ ಕಂಪೆನಿಗಳು ಮತ್ತು ಬ್ರಾಂಡ್ಗಳು ಟಿಕ್ಟಾಕ್ ಅಪ್ಲಿಕೇಷನ್ಗೆ ಸೇರುವ ಮೂಲಕ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಇತ್ತೀಚೆಗೆ ಐಟೆಲ್ ಕಂಪೆನಿ ಟಿಕ್ಟಾಕ್ನಲ್ಲಿ ಅಭಿಯಾನವೊಂದನ್ನು ಪ್ರಾರಂಭಿಸಿತ್ತು. ಇದರಲ್ಲಿ ಟಿಕ್ಟಾಕ್ ಬಳಕೆದಾರರು ಅಗತ್ಯವಾದ ಟ್ಯಾಗ್ ಬಳಸಿ ಐಟೆಲ್ನಲ್ಲಿರುವ ಹಾಡನ್ನು ಪ್ರದರ್ಶಿಸಬೇಕಾಗಿತ್ತು. ನಂತರ ವಿಡಿಯೋವನ್ನು ಅಪ್ಲೋಡ್ ಮಾಡಬೇಕಿತ್ತು. ಇದಕ್ಕೆ ಪ್ರತಿಯಾಗಿ ಐಟೆಲ್ ಕಂಪೆನಿ ಬಳಕೆದಾರರಿಗೆ ಹಣ ಪಾವತಿಸಿದೆ.
ಬಿಂಗೋ, ಅಮೇಜ್ಫಿಟ್, ಮೂವ್ಕಂಪೆನಿ ಟಿಕ್ಟಾಕ್ನಲ್ಲಿ ಅಭಿಯಾನವನ್ನು ಕೈಗೊಂಡು, ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಕಲ್ಪಿಸಿದೆ.
ಟಿಕ್ಟಾಕ್ನಲ್ಲಿ ಎಲ್ಲಾ ಬಳಕೆದಾರರಿಗೆ ಹಣಗಳಿಸಲು ಸಾಧ್ಯವಾಗುವುದಿಲ್ಲ. ಫಾಲೋವರ್ಸ್ ಸಂಖ್ಯೆ ಹೆಚ್ಚಿರುವ ಬಳಕೆದಾರನಿಗೆ ಮಾತ್ರ ಈ ಅವಕಾಶವನ್ನು ನೀಡುತ್ತಿದೆ. 1 ಲಕ್ಷಕ್ಕಿಂತ ಅಧಿಕ ಫಾಲೊವರರ್ಸ್ ಹೊಂದಿರುವ ಬಳಕೆದಾರ ಕಂಪನಿ ಸಂಪರ್ಕಿಸಿ ಕಂಪನಿ ಪರ ವಿಡಿಯೋ ಅಪ್ಲೋಡ್ ಮಾಡಬೇಕು. ಅದಕ್ಕೆ ಪ್ರತಿಯಾಗಿ ಹಣ ಸಿಗಲಿದೆ ಎಂದು ತಿಳಿದು ಬಂದಿದೆ.
Comments are closed.