ರಾಷ್ಟ್ರೀಯ

10 ತಿಂಗಳಲ್ಲಿ ಅತಿ ಹೆಚ್ಚು ಕದನ ವಿರಾಮ ಉಲ್ಲಂಘನೆ ಮಾಡಿ ಅಟ್ಟಹಾಸ ಮೆರೆದ ಪಾಕ್

Pinterest LinkedIn Tumblr

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಉಪಟಳ ಮತ್ತಷ್ಟು ಹೆಚ್ಚಾಗಿದ್ದು, 2019ರ ಜನವರಿಯಿಂದ ನವೆಂಬರ್ 15 ರವರೆಗೆ ಗಡಿ ನಿಯಂತ್ರಣ ರೇಖೆಯ ಬಳಿ ಬರೋಬ್ಬರಿ 2,500 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ವರದಿಯಾಗಿದೆ.

ವರ್ಷದ ಆರಂಭದಿಂದಲೇ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡುತ್ತಿದ್ದ ಪಾಕ್, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಲಡಾಕ್ ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ನಂತರ ಅತೀ ಹೆಚ್ಚು ಭಾರೀ ಕದನ ವಿರಾಮ ಉಲ್ಲಂಘಿಸಿದೆ.

ಅಕ್ಟೋಬರ್‌ನಲ್ಲಿಯೇ 350ಕ್ಕೂ ಹೆಚ್ಚು ಭಾರೀ ಕದನ ವಿರಾಮ ಉಲ್ಲಂಘನೆಯಾಗಿದ್ದು, ಇದು ಕಳೆದ 10 ತಿಂಗಳಲ್ಲಿಯೇ ಅತಿ ಹೆಚ್ಚು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲದೆ ನವೆಂಬರ್ ತಿಂಗಳ ಮೊದಲ 11 ದಿನಗಳಲ್ಲಿ 97 ಭಾರೀ ಕದನ ವಿರಾಮ ಉಲ್ಲಂಘನೆ ಮಾಡಿ ಅಟ್ಟಹಾಸ ಮೆರೆದಿದೆ.

ಹಿರಾನಗರ, ಅಖ್ನೂರ್, ಸುಂದರಬಾನಿ, ನೌಶೇರಾ, ರಾಜೌರಿ, ಮೆಂಧರ್, ಪೂಂಚ್, ಉಡಿ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಸತತವಾಗಿ ಕದನ ವಿರಾಮ ಉಲ್ಲಂಘಿಸಿದೆ ಎಂದು ವರದಿ ತಿಳಿಸಿದೆ.

Comments are closed.