ರಾಷ್ಟ್ರೀಯ

ಗೋವಾ ಡಿಜಿಪಿ ಪ್ರಣಬ್ ನಂದಾ ಹೃದಯಾಘಾತದಿಂದ ಮೃತ್ಯು

Pinterest LinkedIn Tumblr

ಪಣಜಿ : ರಾಷ್ಟ್ರ ರಾಜಧಾನಿಗೆ ಅಧಿಕೃತ ಭೇಟಿ ನೀಡಿದ್ದ ಗೋವಾ ಡಿಜಿಪಿ ಪ್ರಣಬ್ ನಂದಾ ಶನಿವಾರ ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಐಜಿಪಿ ಜಸ್ಪಾಲ್ ಸಿಂಗ್ ಹೇಳಿದ್ದಾರೆ.

1988ರ ಬ್ಯಾಚಿನ ಐಪಿಎಸ್ ಅಧಿಕಾರಿ ಪ್ರಣಬ್ ನಂದಾ ಅರುಣಾಚಲ ಪ್ರದೇಶ, ಮಿರೆರಾಂ ಹಾಗೂ ಇತರ ಕೇಂದ್ರಾಡಳಿತ ಕೇಡರ್‌ಗೆ ಸೇರಿದ್ದಾರೆ. ಈ ವರ್ಷದ ಮಾರ್ಚ್ ನಲ್ಲಿ ಗೋವಾ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯನ್ನು ವಹಿಸಿಕೊಂಡಿದ್ದರು.

ಪ್ರಣಬ್ ನಂದಾ ಅವರ ಪತ್ನಿ ಕೂಡ ಪಾಂಡಿಚೇರಿಯಲ್ಲಿ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Comments are closed.