ರಾಷ್ಟ್ರೀಯ

ಮಹಾರಾಷ್ಟ್ರ ಬಳಿಕ ಬಿಜೆಪಿಗೆ ಮತ್ತೊಂದು ಶಾಕ್!

Pinterest LinkedIn Tumblr


ರಾಂಚಿ: ಮಹಾರಾಷ್ಟ್ರದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನೆ ನಡುವೆ ಫಲಿತಾಂಶದ ನಂತರ ಬಿರುಕುಂಟಾಗಿದ್ದರೆ, ಚುನಾವಣೆ ಹೊಸ್ತಿಲಿನಲ್ಲಿರುವ ಜಾರ್ಖಂಡ್ ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿಗೆ ಶಾಕ್ ಎದುರಾಗಿದೆ.

ಜಾರ್ಖಂಡ್‍ನಲ್ಲಿ ಬಿಜೆಪಿಯ ಪ್ರಾದೇಶಿಕ ಮೈತ್ರಿ ಪಕ್ಷವಾದ ಎಜೆಎಸ್‌ಯು ಸೋಮವಾರ ರಾಜ್ಯ ವಿಧಾನಸಭೆ ಚುನಾವಣೆಗೆ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬೆಳವಣಿಗೆಯನ್ನು ಬಿಜೆಪಿ-ಎಜೆಎಸ್ ಯು ಮೈತ್ರಿಕೂಟದ ನಡುವಿನ ಬಿರುಕು ಎಂದೇ ವಿಶ್ಲೇಷಿಸಲಾಗುತ್ತಿದ್ದು, ಜಾರ್ಖಂಡ್ ನಲ್ಲಿ ಬಿಜೆಪಿ-ಎಸ್ ಜೆಎಸ್ ಯು ನಡುವಿನ ಮೈತ್ರಿ ಅಂತ್ಯಗೊಳ್ಳುವುದು ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತಿದೆ.

ಕುತೂಹಲಕಾರಿ ಸಂಗತಿ ಎಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮಣ್‍ ಗಿಲುವಾ ಕಣಕ್ಕಿಳಿದಿರುವ ಚಕರ್‌ಧರಪುರ ಕ್ಷೇತ್ರದಲ್ಲೇ ಎಜೆಎಸ್‍ಯು ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ.

Comments are closed.