ರಾಷ್ಟ್ರೀಯ

ಬಾಬರಿ ಮಸೀದಿಗೂ ಮೊದಲು ರಾಮ ಮಂದಿರವಿದೆ ಎಂದು ಹೇಳಿದವರು ಯಾರು ಗೊತ್ತಾ?

Pinterest LinkedIn Tumblr


ಹೊಸದಿಲ್ಲಿ: ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬರಿ ಮಸೀದಿ ಭೂ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಲು ಭಾರತೀಯ ಪುರಾತತ್ವ ಇಲಾಖೆ ನೀಡಿದ್ದ ಮಹತ್ವದ ವರದಿ ಪ್ರಮುಖ ಆಧಾರವಾಗಿದೆ.

ಸದ್ಯ ಬಾಬರಿ ಮಸೀದಿ ಇರುವ ಸ್ಥಳದಲ್ಲಿ ಉತ್ಖನನ ನಡೆಸಿದ್ದ ಪುರಾತತ್ವ ಇಲಾಖೆಯ ತಂಡ ಅದರ ಆಧಾರದ ಮೇಲೆ ಈ ವರದಿ ನೀಡಿತ್ತು. ಈ ವರದಿ ತಯಾರಿಸಿದವರು ಯಾರು ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಅವರು ಮತ್ಯಾರೂ ಅಲ್ಲ ಪುರಾತತ್ವ ಇಲಾಖೆಯ ಉತ್ತರ ವಿಭಾಗದ ನಿವೃತ್ತ ಪ್ರಾದೇಶಿಕ ನಿರ್ದೇಶಕ ಕೆಕೆ ಮುಹಮ್ಮದ್‌.

ಬಾಬರಿ ಮಸೀದಿಯ ಅಡಿಯಲ್ಲಿ ರಾಮ ಮಂದಿರ ಇತ್ತೆಂದು ಮೊದಲ ಬಾರಿಗೆ ಸಾಕ್ಷಿ ಸಮೇತ ಹೇಳಿದವರು ಇವರು. ಈ ಹಿನ್ನೆಲೆಯಲ್ಲಿ ತೀರ್ಪಿನ ನಂತರ ಪ್ರತಿಕ್ರಿಯೆ ನೀಡಿರುವ ಅವರು, “ಭಾರತೀಯ ಪುರಾತತ್ವ ಇಲಾಖೆ ಒದಗಿಸಿದ ಪುರಾತತ್ವ ಮತ್ತು ಐತಿಹಾಸಿಕ ಸಾಕ್ಷ್ಯಗಳ ಆಧಾರದ ಮೇಲೆ, ನ್ಯಾಯಾಲಯವು ಈ ಮೊದಲು ಅಲ್ಲಿ (ವಿವಾದಿತ ಸ್ಥಳದಲ್ಲಿ) ಒಂದು ಬೃಹತ್ ಭವ್ಯವಾದ ದೇವಾಲಯವಿತ್ತು ಮತ್ತು ನಾವು ಮತ್ತೊಮ್ಮೆ ಹೊಸ ದೇವಾಲಯವನ್ನು ನಿರ್ಮಿಸಬೇಕು ಎಂಬ ತೀರ್ಮಾನಕ್ಕೆ ಬಂದಿದೆ,” ಎಂದು ವಿವರಿಸಿದ್ದಾರೆ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿಗೂ ಮುಂಚೆಯೇ ರಾಮ ಮಂದಿರ ಅಸ್ತಿತ್ವದಲ್ಲಿತ್ತು ಎಂದು ಅವರು ಈ ಹಿಂದೆ ಹೇಳಿದ್ದರು. “ನಾನು ಇದಕ್ಕೆ ಸಮರ್ಥನೆ ಹೊಂದಿದ್ದೇನೆ. ನಾನು ಈ ಸಂಬಂಧ ಜನರ ಗುಂಪಿನಿಂದ ಸುತ್ತುವರಿಯಲ್ಪಟ್ಟಿದ್ದೇನೆ. ಇದು ನಾವೆಲ್ಲರೂ ಬಯಸಿದ ರೀತಿಯ ನಿರ್ಧಾರವಾಗಿದೆ,” ಎಂದು ಪ್ರತಿಕ್ರಿಯಿಸಿದ್ದಾರೆ.

Comments are closed.