ರಾಷ್ಟ್ರೀಯ

ಯುವತಿ ಜೊತೆ ಓಡಿ ಹೋದನೆಂದು ಹುಡುಗನಿಗೆ ಬೆಲ್ಟ್‌ನಿಂದ ಥಳಿಸಿದ ಪೊಲೀಸ್!

Pinterest LinkedIn Tumblr


ಲಕ್ನೋ: ಪೊಲೀಸರ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವರದಿಗಳ ಪ್ರಕಾರ ಈ ಘಟನೆ ಉತ್ತರಪ್ರದೇಶ ಕಾನ್ಪುರದಲ್ಲಿ ನಡೆದಿದೆ. ವಿಡಿಯೋದಲ್ಲಿ ಪೊಲೀಸಪ್ಪನೊಬ್ಬ ಯುವಕನಿಗೆ ಬೆಲ್ಟ್ ನಿಂದ ಚೆನ್ನಾಗಿ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ವಿಡಿಯೋ ಮಾಡುತ್ತಿರುವ ಇತರ ಪೊಲೀಸರು ನಗುವುದನ್ನು ಕೂಡ ಕೇಳಬಹುದು.

ಹುಡುಗಿ ಜೊತೆ ಓಡಿ ಹೋದ ಆರೋಪದ ನಂತರ ಯುವಕನನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಯುವಕನನ್ನು ಠಾಣೆಯೊಳಗೆ ಕರೆದುಕೊಂಡು ಹೋಗಿ ತನಿಖೆ ಮಾಡುವ ಬದಲು ಪೊಲೀಸಪ್ಪ, ಹೊರಗಡೆಯೇ ಲೆದರ್ ಬೆಲ್ಟ್ ನಿಂದ ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ನೋವಿನಿಂದ ಯುವಕ ಬಿಟ್ಟುಬಿಡಿ ಅಂದರೂ ಪೊಲೀಸರು ಮಾತ್ರ ಆತನ ಮನವಿಗೆ ಕ್ಯಾರೇ ಎಂದಿಲ್ಲ.

ಈ ಸಂಬಂಧ ಕಾನ್ಪುರದ ಉಪ ಪೊಲೀಸ್ ಆಯುಕ್ತ ಪ್ರದುಮಾನ್ ಸಿಂಗ್ ಪ್ರತಿಕ್ರಿಯಿಸಿ, ಪ್ರಕರಣ ಕುರಿತು ತನಿಖೆಗೆ ಆದೇಶಸಿದ್ದು, ಶೀಘ್ರವೇ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳೀಸಿದ್ದಾರೆ.

Comments are closed.