ಪುದುಚೇರಿ:ದೇವಾಲಯದ ಹೊರಗೆ ಭಿಕ್ಷೆ ಬೇಡುತ್ತಿದ್ದ ಅಜ್ಜಿಯ ಬಳಿ 12 ಸಾವಿರ ರೂಪಾಯಿ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ 2 ಲಕ್ಷ ರೂಪಾಯಿ ಠೇವಣಿ, ಕ್ರೆಡಿಟ್ ಕಾರ್ಡ್, ಆಧಾರ್ ಕಾರ್ಡ್ ಹೊಂದಿರುವುದನ್ನು ಪುದುಚೇರಿ ದೇವಾಲಯದ ಅಧಿಕಾರಿಗಳು ಪತ್ತೆ ಹಚ್ಚಿರುವುದಾಗಿ ವರದಿ ತಿಳಿಸಿದೆ.
70ವರ್ಷದ ಪಾರ್ವತಮ್ ಎಂಬ ಮಹಿಳೆ ಪುದುಚೇರಿಯ ದೇವಾಲಯಕ್ಕೆ ಬರುವ ಭಕ್ತರಿಂದ ಭಿಕ್ಷೆ ಬೇಡುತ್ತಿದ್ದರು. ಗುರುವಾರ ದೇವಾಲಯದ ಹೊರಭಾಗದಲ್ಲಿ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಆಕೆ ದಾರಿಯಲ್ಲಿ ಹೋಗುತ್ತಿದ್ದವರ ಬಳಿ ನೆರವು ಕೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಎಎನ್ ಐ ಜತೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಮಾರನ್, ಈಕೆ ಬ್ಯಾಂಕ್ ಖಾತೆ ಹೊಂದಿದ್ದು ಅದರಲ್ಲಿ 2 ಲಕ್ಷ ರೂಪಾಯಿ ಠೇವಣಿ ಇದೆ. ಕೈಯಲ್ಲಿ ನಗದು 12 ಸಾವಿರ ರೂಪಾಯಿ ಇತ್ತು. ಈಕೆ ತಮಿಳುನಾಡಿನ ಕಲ್ಲಿಕುರಿಚಿ ಗ್ರಾಮದ ನಿವಾಸಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ಪಾರ್ವತಂ ಪತಿ ತೀರಿಹೋದ ನಂತರ ಪಾಂಡಿಚೇರಿಗೆ ಆಗಮಿಸಿ ಬೀದಿ, ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದು, ಇದೀಗ ಕಲ್ಲಿಕುರುಚಿಯಲ್ಲಿರುವ ಸಂಬಂಧಿಕರಿಗೆ ಒಪ್ಪಿಸಲಾಗಿದೆ ಎಂದು ಮಾರನ್ ಹೇಳಿದರು.
Comments are closed.