ರಾಷ್ಟ್ರೀಯ

1ಕ್ಕಿಂತ ಹೆಚ್ಚು ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದೀರಾ?

Pinterest LinkedIn Tumblr

ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದರೆ, ತುಂಬಾ ಸಮಯದಿಂದ ಆ ಖಾತೆಯನ್ನು ಬಳಸದಿದ್ದರೆ ಕೂಡಲೇ ಆ ಅಕೌಂಟ್​​ನ್ನು ಕ್ಲೋಸ್​ ಮಾಡಿಸಬೇಕಾಗುತ್ತದೆ. ಒಂದು ವೇಳೆ, ಅಕೌಂಟ್​ ಕ್ಲೋಸ್​ ಮಾಡಿಸದಿದ್ದರೆ, ಬ್ಯಾಂಕ್​ಗೆ ನೀವು ಹೆಚ್ಚಿನ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಬ್ಯಾಂಕ್​ ಗ್ರಾಹಕರು ತಿಳಿದುಕೊಳ್ಳಬೇಕಾದ ಹೆಚ್ಚಿನ ಅಂಶಗಳು ಇಲ್ಲಿವೆ.

ನಿಮ್ಮ ಹೆಸರಿನಲ್ಲಿ ಬ್ಯಾಂಕ್​ ಖಾತೆ ಇದ್ದು, ಅದನ್ನು ನೀವು ತುಂಬಾ ದಿನಗಳಿಂದ ಬಳಸದಿದ್ದರೆ, ಈಗ ಆ ಖಾತೆಯನ್ನು ಮುಚ್ಚುವುದು ಉತ್ತಮ. ಬ್ಯಾಂಕ್​​​ನ ನಿಯಮದ ಪ್ರಕಾರ, ಗ್ರಾಹಕ ತನ್ನ ಖಾತೆಯಲ್ಲಿ ಕನಿಷ್ಠ ಹಣವನ್ನು ಇಟ್ಟು, ನಿಯಮಿತವಾಗಿ ಹಣ ವ್ಯವಹಾರ ಮಾಡಬೇಕು. ಇಲ್ಲವಾದರೆ ಬ್ಯಾಂಕ್​ ನಿಮಗೆ ಹೆಚ್ಚಿನ ದಂಡ ವಿಧಿಸುತ್ತದೆ.

ಹೀಗಾಗಿ, ಬ್ಯಾಂಕ್​ ಖಾತೆಯನ್ನು ನಿಷ್ಕ್ರಿಯೆಗೊಳಿಸಿ ಎಂದು ಪರಿಣಿತರು ಸಲಹೆ ನೀಡಿದ್ದಾರೆ. ನಿಮ್ಮ ಬ್ಯಾಂಕ್​ ಖಾತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೊತೆ ಕೂಡಲೇ ಬ್ಯಾಂಕ್​ಗೆ ಹೋಗಿ ಖಾತೆಯನ್ನು ಕ್ಲೋಸ್​ ಮಾಡಿಸುವುದು ಒಳಿತು. ಯಾಕೆಂದರೆ, ನಿಮ್ಮ ಎಲ್ಲಾ ಹೂಡಿಕೆಗಳು, ಸಾಲ, ವ್ಯಾಪಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್​​ ಮತ್ತು ವಿಮೆ (ಇನ್ಷೂರೆನ್ಸ್​) ಯೊಂದಿಗೆ ಸಂಪರ್ಕ ಹೊಂದಿರುವ ಪೇಮೆಂಟ್​​​​​ಗಳನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್​ ಮಾಡಲಾಗಿರುತ್ತದೆ.

ನಿಮ್ಮ ಬ್ಯಾಂಕ್​ ಖಾತೆಯನ್ನು ಕ್ಲೋಸ್​ ಮಾಡುವುದು ಹೇಗೆ?

ಇಂದಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ಹಾಗೂ ಮತ್ತಿತರ ಕಾರಣಗಳಿಂದ ಆಗಾಗ್ಗೆ ತಮ್ಮ ಉದ್ಯೋಗಗಳನ್ನು ಬದಲಾಯಿಸುತ್ತಾರೆ. ಪ್ರತಿಯೊಂದು ಕಂಪನಿಯು ತನ್ನದೇಯಾದ ನಿಯಮ ಹಾಗೂ ಷರತ್ತುಗಳನ್ನು ಹೊಂದಿರುತ್ತದೆ. ಹೊಸ ಕಂಪನಿಗೆ ಕೆಲಸಕ್ಕೆಂದು ಹೋದಾಗ ಅಲ್ಲಿನ ಷರತ್ತುಗಳಿಗೆ ಅನುಗುಣವಾಗಿ ಬ್ಯಾಂಕ್​ ಖಾತೆ ತೆರೆಯಬೇಕಾಗುತ್ತದೆ. ಈ ವೇಳೆ, ನೀವು ಹಿಂದಿನ ಸಂಸ್ಥೆಯಲ್ಲಿ ಬಳಸುತ್ತಿದ್ದ ಸ್ಯಾಲರಿ ಅಕೌಂಟ್​(ಸಂಬಳ ಖಾತೆ) ನಿಷ್ರ್ಕಿಯಗೊಳ್ಳುತ್ತದೆ. ಸಂಬಳ ಬರುವುದು ನಿಂತಾಗ, ಅದು ಸೇವಿಂಗ್ಸ್​ ಅಕೌಂಟ್​(ಉಳಿತಾಯ ಖಾತೆ) ಆಗಿ ಮಾರ್ಪಡುತ್ತದೆ.
ಯಾವಾಗ ಖಾತೆಯ ಸ್ವರೂಪ ಬದಲಾಗುತ್ತದೋ, ಆಗ ಬ್ಯಾಂಕಿನ ನಿಯಮಗಳು ಕೂಡ ಬದಲಾಗುತ್ತವೆ. ಈ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತದ ಹಣ ಇಟ್ಟು, ಖಾತೆಯನ್ನು ಜೀವಂತವಾಗಿಡಬೇಕು. ಹೀಗೆ ಮಾಡಲು ನೀವು ವಿಫಲವಾದರೆ, ಬ್ಯಾಂಕ್​ ನಿಮ್ಮ ಖಾತೆಯಲ್ಲಿನ ಹಣವನ್ನು ಕಡಿತಗೊಳಿಸುವ ಮೂಲಕ ದಂಡ ವಿಧಿಸಲು ಪ್ರಾರಂಭಿಸುತ್ತದೆ.

ಒಂದಕ್ಕಿಂತ ಹೆಚ್ಚಿನ ಬ್ಯಾಂಕ್​ ಖಾತೆಗಳನ್ನು ಹೊಂದಿದ್ದರೆ, ಆದಾಯ ತೆರಿಗೆ ಸಲ್ಲಿಸುವಾಗ(ಐಟಿ ರಿಟನ್​​​) ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ನೀವು ಎಲ್ಲಾ ಖಾತೆಗಳ ಪ್ರತಿಯೊಂದು ವಿವರವನ್ನು ತಪ್ಪದೇ ನೀಡಬೇಕಾಗುತ್ತದೆ. ಐಟಿ ರಿಟನ್​​ ಸಲ್ಲಿಸುವ ವೇಳೆ, ಎಲ್ಲಾ ಅಕೌಂಟ್​​ಗಳ ಸ್ಟೇಟ್​​ಮೆಂಟ್ಸ್​​ನ್ನು ಕೂಡ ನೀಡಬೇಕಾಗುತ್ತದೆ. ಇದು ನಿಮನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುತ್ತದೆ.
ನಿಷ್ಕ್ರಿಯ ಖಾತೆಯನ್ನು ಸರಿಯಾಗಿ ಬಳಸದಿದ್ದರೆ ಅದು ನಿಮಗೆ ನಷ್ಟವಾಗುತ್ತದೆ. ಬ್ಯಾಂಕ್​ ನಿಮಗೆ ದಂಡ ವಿಧೀಸುವುದರಿಂದ ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ 4 ಬ್ಯಾಂಕ್​ ಖಾತೆಗಳನ್ನು ಹೊಂದಿದ್ದರೆ, ಕನಿಷ್ಠ 10 ಸಾವಿರ ಹಣವನ್ನು ಖಾತೆಯಲ್ಲಿ ಇಡಬೇಕಾಗುತ್ತದೆ.
ನಿಮ್ಮ ಖಾತೆಯಲ್ಲಿ ಕನಿಷ್ಠ ಹಣವಿದ್ದರೆ, ಬ್ಯಾಂಕ್​ ಶೇ.4ರ ದರದಲ್ಲಿ ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. ಆಗ, ನಿಮಗೆ 1600 ರೂ. ಬಡ್ಡಿ ಹಣ ಸಿಗುತ್ತದೆ. ಬ್ಯಾಂಕ್​ ಖಾತೆಯನ್ನು ಕ್ಲೋಸ್​ ಮಾಡಿ, ಮ್ಯೂಚುಯಲ್​ ಫಂಡ್ಸ್​​ನಲ್ಲಿ ನೀವು ಹೂಡಿಕೆ ಮಾಡಿದರೆ, ಬ್ಯಾಂಕ್​ ನಿಮಗೆ ಶೇ.10ರ ದರದಲ್ಲಿ ವಾರ್ಷಿಕ ಬಡ್ಡಿ ನೀಡುತ್ತದೆ.

ಬ್ಯಾಂಕ್​ ಖಾತೆ ಕ್ಲೋಸ್​ ಮಾಡಿಸಲು ಹೀಗೆ ಮಾಡಿ

ಖಾತೆ ನಿಷ್ಕ್ರಿಯಗೊಳಿಸುವ ಅಫ್ಲಿಕೇಶನ್​ನಲ್ಲಿ ಅಲ್ಲಿ ಕೇಳಿರುವ ಸೂಕ್ತ ಮಾಹಿತಿಯನ್ನು ಭರ್ತಿ ಮಾಡಬೇಕು.
ಖಾತೆ ಮುಚ್ಚಲು ಕಾರಣ ಏನೆಂದು ನಮೂದಿಸಬೇಕು. ಜಂಟಿ ಖಾತೆಯಾಗಿದ್ದರೆ, ಎಲ್ಲಾ ಖಾತೆದಾರರು ಸಹಿ ಮಾಡಬೇಕು.
ನಿಮ್ಮ ಹಣ ವರ್ಗಾಯಿಸಲು ನೀವು ಬಯಸುವ ನಿಮ್ಮ ಖಾತೆಯ ವಿವರಗಳನ್ನು ಒದಗಿಸಬೇಕು.
ಖಾತೆಯನ್ನು ಮುಚ್ಚಲು ಖಾತೆದಾರರು ಬ್ಯಾಂಕ್​ಗೆ ಹೋಗಬೇಕು. ಆನ್​ಲೈನ್​ ಮೂಲಕ ಸಾಧ್ಯವಿಲ್ಲ.

ಅಕೌಂಟ್​​ ಕ್ಲೋಸ್​ ಮಾಡಿಸಲು ಕಟ್ಟಬೇಕಾದ ಶುಲ್ಕ

ಖಾತೆದಾರ ತನ್ನ ಖಾತೆ ತೆರೆದು 14 ದಿನಗಳೊಳಗೆ ಮುಚ್ಚಿದರೆ ಬ್ಯಾಂಕ್​ಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ. 1 ವರ್ಷಕ್ಕೆ ತೆರೆದ ನಂತರ 14 ದಿನಗಳ ಅವಧಿಯಲ್ಲಿ ಅದನ್ನು ಮುಚ್ಚಲು ಯಾರಾದರೂ ಬಯಸಿದರೆ, ಅವನು ಖಾತೆ ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ, ನೀವು ಒಂದು ವರ್ಷಕ್ಕಿಂತ ಹಳೆಯದಾದ ಖಾತೆಯನ್ನು ಮುಚ್ಚಿದರೆ ಯಾವುದೇ ಶುಲ್ಕವಿರುವುದಿಲ್ಲ.

ಒದಗಿಸಬೇಕಾದ ದಾಖಲೆಗಳು:

ಖಾತೆ ಮುಚ್ಚುವ ಅಫ್ಲಿಕೇಶನ್​​ ಜೊತೆಗೆ ಬಳಕೆಯಾಗದ ಚೆಕ್ ಬುಕ್ ಮತ್ತು ಡೆಬಿಟ್ ಕಾರ್ಡ್​​ನ್ನು ಬ್ಯಾಂಕ್​ಗೆ ನೀಡಬೇಕು.

ಖಾತೆಯಲ್ಲಿ ಹಣವಿದ್ದರೆ:

ಮುಚ್ಚಬೇಕಾದ ಖಾತೆಯಲ್ಲಿ ಹಣವಿದ್ದರೆ, 20,000 ರೂ. ವರೆಗೆ ಮಾತ್ರ ನಗದು ರೂಪದಲ್ಲಿ ಹಣ ತೆಗೆದುಕೊಳ್ಳಬಹುದು. ಈ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸುವ ಅವಕಾಶವಿದೆ. ಒಂದು ವೇಳೆ ಖಾತೆಯಲ್ಲಿ ದೊಡ್ಡ ಮೊತ್ತದ ಹಣವಿದ್ದರೆ, ಅದನ್ನು ಕ್ಲೋಸ್​ ಮಾಡಿಸುವ ಮೊದಲು ಮತ್ತೊಂದು ಖಾತೆಗೆ ವರ್ಗಾಯಿಸುವುದು ಉತ್ತಮ.

Comments are closed.