ರಾಷ್ಟ್ರೀಯ

ಹಣ್ಣು ಮಾರಾಟಗಾರ 400 ಕೋಟಿ ವಹಿವಾಟು ನಡೆಸುತ್ತಿರುವುದು ಹೇಗೆ?

Pinterest LinkedIn Tumblr


ಗುರಿಯೊಂದು ಸ್ಪಷ್ಟವಾಗಿದ್ದು ಆ ನಿಟ್ಟಿನಲ್ಲಿಯೇ ಸಾಧನೆಗೈದರೆ ಯಶಸ್ಸು ತಲೆಬಾಗಲೇಬೇಕು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ನಾಗಪುರದ 40 ವರ್ಷದ ಉದ್ಯಮಿ ಪ್ಯಾರೆ ಖಾನ್.

ಹಿಂದೊಮ್ಮೆ ಕಿತ್ತಳೆ ಹಣ್ಣು ವ್ಯಾಪಾರ ಮಾಡಿ ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದ ಇವರೀಗ ಸುಮಾರು 400 ಕೋಟಿ ವಹಿವಾಟು ನಡೆಸುವ ಟ್ರಾನ್ಸ್​ಪೋರ್ಟ್ ಕಂಪನಿಯ ಮಾಲೀಕ. ಮಾತ್ರವಲ್ಲದೇ 500ಕ್ಕೂ ಮಿಕ್ಕಿದ ಜನರಿಗೆ ಉದ್ಯೋಗ ನೀಡಿರುವ ಇವರು, ಸುಮಾರು 150 ಟ್ರಕ್​ಗಳನ್ನು ಹೊಂದಿ ವ್ಯವಹಾರ ನಡೆಸುತ್ತಿದ್ದಾರೆ.

ತಮ್ಮ ಸಾಧನೆ ಬಗ್ಗೆ ಅವರು ಹೇಳುವುದು ಹೀಗೆ: ಗಾಡಿ ಓಡಿಸುವುದನ್ನು ಮೊದಲೇ ಕಲಿತಿದ್ದೆ. 18ನೇ ವಯಸ್ಸಿಗೆ ಡಿಎಲ್ ಸಿಕ್ಕ ತಕ್ಷಣ ಚಾಲಕನ ವೃತ್ತಿಗೆ ಸೇರಿದೆ. ನಂತರ ಆಟೊ ಖರೀದಿಸಿ ಓಡಿಸಿದೆ. ಕೀಬೋರ್ಡ್ ಹವ್ಯಾಸ ಕೂಡ ಇದ್ದುದರಿಂದ ಆ ಕಾರ್ಯಕ್ರಮಗಳಿಂದ ಬಂದ ಹಣದ ಜತೆಗೆ, ನನ್ನ ಕೆಲವೊಂದು ವಸ್ತುಗಳನ್ನು ಮಾರಿ ಬಸ್ ನಂತರ ಟ್ರಕ್ ಖರೀದಿಸಿದೆ. ಇದು ನನ್ನ ಕೈಹಿಡಿಯಿತು. ಕೆಲ ವರ್ಷಗಳಲ್ಲಿಯೇ ಟ್ರಕ್ ಸಂಖ್ಯೆ 8ಕ್ಕೇರಿತು.

ನಂತರ ನಾನೇ ಅಶ್ಮಿ ರೋಡ್ ಟ್ರಾನ್ಸ್​ಪೋರ್ಟ್ ಸಂಸ್ಥೆ ಶುರುಮಾಡಿದೆ. 2018ರಲ್ಲಿ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಾರಿಗೆ ಉದ್ಯಮಿ ವಿಭಾಗದ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಲಭಿಸಿತು. ಅಲ್ಲಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಅವರು, ತಮ್ಮ ವ್ಯವಹಾರಗಳನ್ನು ವಿಸ್ತರಿಸುತ್ತ ಸಾಗಿದ್ದಾರೆ.

Comments are closed.