ರಾಷ್ಟ್ರೀಯ

ಪಾಕ್ ನ ಐಎಸ್ ಐ ಮಹಿಳಾ ಏಜೆಂಟ್ ಗೆ ಮಾಹಿತಿ ರವಾನೆ; ಯೋಧರ ಬಂಧನ

Pinterest LinkedIn Tumblr


ಜೈಪುರ್: ಪಾಕಿಸ್ತಾನ ಮೂಲದ ಮಹಿಳಾ ಐಎಸ್ ಐ ಏಜೆಂಟ್ ಗೆ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದ ಆರೋಪದ ಮೇಲೆ ಇಬ್ಬರು ಭಾರತೀಯ ಯೋಧರನ್ನು ಜೋಧ್ ಪುರ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಇಬ್ಬರು ಯೋಧರು ತಮ್ಮ ಗ್ರಾಮವಾದ ಫೋಖ್ರಾನ್ ಗೆ ತೆರಳುತ್ತಿದ್ದು, ಗುಪ್ತಚರ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ಜೋಧ್ ಪುರ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವುದಾಗಿ ಹೇಳಿದೆ.

ಪಾಕಿಸ್ತಾನಿ ಮಹಿಳೆಯೊಬ್ಬಳ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಈ ಇಬ್ಬರು ಯೋಧರು ಮಹತ್ವದ ಮಾಹಿತಿಯನ್ನು ಕಳುಹಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಜೋಧ್ ಪುರದಿಂದ ಜೈಪುರಕ್ಕೆ ಕರೆತರಲಾಗಿದೆ ಎಂದು ವರದಿ ತಿಳಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಈ ಇಬ್ಬರು ಹನಿಟ್ರ್ಯಾಪ್ ಗೆ ಒಳಗಾಗಿರುವುದು ಸಾಬೀತಾಗಿದೆ ಎಂದು ರಾಜಸ್ಥಾನದ ಹೆಚ್ಚುವರಿ ಡೈರೆಕ್ಟರ್ ಜನರಲ್ ಉಮೇಶ್ ಮಿಶ್ರಾ ಅವರು ತಿಳಿಸಿದ್ದಾರೆ. ಇಬ್ಬರೂ ಯೋಧರು ವಾಟ್ಸಪ್ ಮತ್ತು ಫೇಸ್ ಬುಕ್ ಮೂಲಕ ಪಾಕಿಸ್ತಾನಿ ಐಎಸ್ ಐ ಮಹಿಳೆಗೆ ಮಾಹಿತಿ ರವಾನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.