ರಾಷ್ಟ್ರೀಯ

ಮದುವೆಯಾಗಿ ವರ್ಷದಲ್ಲೇ ಮತ್ತೊಬ್ಬನ ಮೇಲೆ ಚಿಗುರಿದ ಪ್ರೀತಿ: ಇನಿಯನೊಂದಿಗೆ ಸೇರಿ ಪತಿಯ ಹತ್ಯೆ

Pinterest LinkedIn Tumblr


ಲಕ್ನೋ: ವಿಚ್ಛೇಧನ ನೀಡದ ಪತಿಯನ್ನು ತನ್ನ ಇನಿಯನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಂಕರಕೇಡಾ ಹೋಬಳಿಯ ಶೋಭಾಪುರದಲ್ಲಿ ನಡೆದಿದೆ. ಪೊಲೀಸರು ಪ್ರಕರಣವನ್ನ ಕೇವಲ 12 ಗಂಟೆಯಲ್ಲಿಯೇ ಭೇದಿಸಿ ಪತ್ನಿ ಮತ್ತು ಆಕೆಯ ಇನಿಯನನ್ನು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಪ್ರದೀಪ್ ಕುಮಾರ್ (25) ಕೊಲೆಯಾದ ಪತಿ. ಶನಿವಾರ ರಾತ್ರಿ ಪ್ರದೀಪ್ ನನ್ನು ಮನೆಯ ಹೊರಗಡೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಪತ್ನಿ ಮನ್‌ಪ್ರೀತ್ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು ಜೈಲುಪಾಲಾಗಿದ್ದಾಳೆ.

ಪ್ರತಿನಿತ್ಯ ಪತಿ ಜೊತೆ ಮನ್‌ಪ್ರೀತ್ ಜಗಳ ಮಾಡುತ್ತಿದ್ದಳು ಎಂಬ ವಿಚಾರ ತಿಳಿದ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ. ಪ್ರದೀಪ್ ಕುಮಾರ್ ಎನ್‌ಜಿಓನಲ್ಲಿ ಕೆಲಸ ಮಾಡಿಕೊಂಡಿದ್ದನು. ಎರಡೂವರೆ ವರ್ಷಗಳ ಹಿಂದೆ ಮನ್‌ಪ್ರೀತ್‌ಗೆ ಫೇಸ್‌ಬುಕ್ ನಲ್ಲಿ ಪ್ರದೀಪ್ ಪರಿಚಯವಾಗಿದ್ದನು. ಪರಿಚಯ ಪ್ರೇಮವಾಗಿ ಬದಲಾದಾಗ ಮನೆಯರ ವಿರೋಧದ ನಡುವೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನ್‌ಪ್ರೀತ್ ಸಹ ಅದೇ ಎನ್‌ಜಿಓದಲ್ಲಿ ಕೆಲಸ ಮಾಡಿಕೊಂಡಿದ್ದಳು.

ಮನ್‌ಪ್ರೀತ್ ಗೆ ಒಂದು ವರ್ಷದ ಹಿಂದೆ ರಾಜದೀಪ್ ಅಲಿಯಾಸ್ ರಾಜ್ ಎಂಬಾತನ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ರಾಜ್ ಪ್ರೀತಿಯಲ್ಲಿ ಮುಳುಗಿದ್ದ ಮನ್‌ಪ್ರೀತ್ ಪತಿಗೆ ವಿಚ್ಛೇಧನ ನೀಡುವಂತೆ ಒತ್ತಾಯಿಸುತ್ತಿದ್ದಳು. ಆದರೆ ಪ್ರದೀಪ್ ವಿಚ್ಛೇಧನ ನೀಡಲ್ಲ ಎಂದು ಹೇಳಿದ್ದನು.

ಮನ್‌ಪ್ರೀತ್ ವಿಚ್ಛೇಧನ ಕೇಳುತ್ತಿದ್ದಂತೆ ಪ್ರದೀಪ್ ಗೆ ಅನುಮಾನ ಬಂದಿತ್ತು. ಹಾಗಾಗಿ ಕೆಲ ದಿನಗಳಿಂದ ಪತ್ನಿಯನ್ನು ಪ್ರದೀಪ್ ಶಂಕಿಸಲಾರಂಭಿಸಿದ್ದನು. ಪ್ರದೀಪ್ ವಿಚ್ಛೇಧನ ನೀಡಲು ಒಪ್ಪದಿದ್ದಾಗ ಮೂರು ತಿಂಗಳ ಹಿಂದೆ ರಾಜಸ್ಥಾನದ ಹನುಮಾನಗಢ ಎಂಬಲ್ಲಿ ರಾಜ್ ಜೊತೆ ರಹಸ್ಯವಾಗಿ ಮದುವೆ ಆಗಿದ್ದಳು. ರಾಜ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಪ್ರೇಮಿ ಜೊತೆ ಮಾತನಾಡುವಾಗ ಮನ್‌ಪ್ರೀತ್ ಪತಿಯ ಕೈಗೆ ಸಿಕ್ಕಿಬಿದ್ದಿದ್ದಳು. ಫೋನ್ ಕಸಿದುಕೊಂಡ ಪ್ರದೀಪ್, ಪತ್ನಿಯ ಕಪಾಳಕ್ಕೆ ಬಾರಿಸಿದ್ದನು. ಪತಿ ಮನೆಯಿಂದ ತೆರಳುತ್ತಿದ್ದಂತೆ ಇನಿಯನಿಗೆ ಫೋನ್ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಳು.

ಕೋಪಗೊಂಡ ರಾಜ್, ಸಂಜೆ ಹೇಗಾದ್ರೂ ಮಾಡಿ ಆತನನ್ನು ಹೊರಗೆ ಕರೆದುಕೊಂಡು ಬಾ ಅವನನ್ನು ಮುಗಿಸುತ್ತೇನೆ ಎಂದು ಹೇಳಿ ಗೆಳತಿಗೆ ಸಮಾಧಾನ ಮಾಡಿದ್ದನು. ರಾಜ್ ಮಾತಿನಂತೆ ಮನ್‌ಪ್ರೀತ್ ಪತಿಯನ್ನು ಕರೆದುಕೊಂಡು ಬೇಕರಿಗೆ ಬಂದು ರಾಜ್ ಗೆ ಕಾಲ್ ಮಾಡಿದ್ದಳು.

ಸೋದರನ ಜೊತೆ ಬೈಕ್ ಮೇಲೆ ಬಂದ ರಾಜ್ ಗುಂಡು ಹಾರಿಸಿ ಪ್ರದೀಪ್ ಬಳಿ ಬಂದಿದ್ದನು. ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಮೂವರು ಪ್ರದೀಪ್ ನನ್ನು ಸುತ್ತುವರೆದು ನಿಂದಿಸಲು ಆರಂಭಿಸಿದ್ದಾರೆ. ಈ ವೇಳೆ ಕೋಪಗೊಂಡ ರಾಜ್ ಹಣೆಗೆ ಗುಂಡಿಟ್ಟು ಕೊಲೆಗೈದು ಪರಾರಿಯಾಗಿದ್ದನು.

Comments are closed.