ರಾಷ್ಟ್ರೀಯ

ತೀಸ್ ಹಜಾರಿ ಕೋರ್ಟ್ ಪ್ರಕರಣ : ದೆಹಲಿ ಪೊಲೀಸರಿಂದ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ.

Pinterest LinkedIn Tumblr

ನವದೆಹಲಿ: ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಎರಡು ದಿನದ ಹಿಂದೆ ಪೊಲೀಸರ ಮೇಲೆ ವಕೀಲರು ಹಲ್ಲೆ ನಡೆಸಿದ್ದರು, ಇದೀಗ ಅದನ್ನು ಖಂಡಿಸಿ ಮಂಗಳವಾರ ದೆಹಲಿ ಪೊಲೀಸರು ಮತ್ತು ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪೊಲೀಸ್ ಸಮವಸ್ತ್ರ ಧರಿಸಿ, ಕಪ್ಪು ಪಟ್ಟಿ ಧರಿಸಿ ವಕೀಲರ ಹಲ್ಲೆಯನ್ನು ಖಂಡಿಸಿ ಪೊಲೀಸ್ ಕೇಂದ್ರ ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

ಪೊಲೀಸರು ತಮ್ಮ ಕುಟುಂಬದ ಸದಸ್ಯರೊಂದಿಗೆ ನೂರಾರು ಸಂಖ್ಯೆಯಲ್ಲಿ ಸೇರಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ವಕೀಲರ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸಿರುವುದನ್ನು ಖಂಡಿಸಿ ದೆಹಲಿಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ನವೆಂಬರ್ 2ರಂದು ತೀಸ್ ಹಜಾರಿ ಕೋರ್ಟ್ ಸಂಕೀರ್ಣದ ಆವರಣದಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ಗಲಾಟೆ ನಡೆದು ಹೆಚ್ಚುವರಿ ಸಹಾಯಕ ಪೊಲೀಸ್ ಕಮೀಷನರ್ ಸೇರಿದಂತೆ 20 ಮಂದಿ ಪೊಲೀಸರು ಮತ್ತು ಎಂಟು ಮಂದಿ ವಕೀಲರು ಗಾಯಗೊಂಡಿದ್ದರು.

Comments are closed.