ರಾಷ್ಟ್ರೀಯ

ಭಾರತದ ಹೊಸ ಪೊಲಿಟಿಕಲ್ ಮ್ಯಾಪ್ ಬಿಡುಗಡೆ

Pinterest LinkedIn Tumblr

ನವದೆಹಲಿ: ಕಳೆದ ಅಕ್ಟೋಬರ್ 31ರಂದು ದೇಶದ ಹೊಸ ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಅಸ್ತಿತ್ವಕ್ಕೆ ಬಂದಿದ್ದು, ಇದರೊಂದಿಗೆ ಭಾರತದ ನಕ್ಷೆಯೂ(ಮ್ಯಾಪ್) ಬದಲಾಗಿದೆ.

ಕೇಂದ್ರ ಸರ್ಕಾರ ಶನಿವಾರ ಹೊಸ ಪೊಲಿಟಿಕಲ್ ಮ್ಯಾಪ್ ಅನ್ನು ಬಿಡುಗಡೆ ಮಾಡಿದ್ದು, ಅದು 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

ಜಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗು ಮುನ್ನ ದೇಶದಲ್ಲಿ ಒಟ್ಟು 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿದ್ದವು. ಈಗ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9 ಏರಿಕೆಯಾಗಿದೆ.

ರಾಜ್ಯಗಳು
ಆಂಧ್ರ ಪ್ರದೇಶ
ಅರುಣಾಚಲ ಪ್ರದೇಶ
ಅಸ್ಸಾಂ
ಬಿಹಾರ
ಛತ್ತೀಸಗಡ
ಗೋವಾ
ಗುಜರಾತ್
ಹರಿಯಾಣ
ಹಿಮಾಚಲ ಪ್ರದೇಶ
ಜಾರ್ಖಂಡ್
ಕರ್ನಾಟಕ
ಕೇರಳ
ಮಧ್ಯ ಪ್ರದೇಶ
ಮಹಾರಾಷ್ಟ್ರ
ಮಣಿಪುರ
ಮೇಘಾಲಯ
ಮಿಜೋರಾಂ
ನಾಗಾಲ್ಯಾಂಡ್
ಒಡಿಶಾ
ಪಂಜಾಬ್
ರಾಜಸ್ಥಾನ
ಸಿಕ್ಕಿಂ
ತಮಿಳುನಾಡು
ತೆಲಂಗಾಣ
ತ್ರಿಪುರಾ
ಉತ್ತರ ಪ್ರದೇಶ
ಉತ್ತರಾಖಂಡ
ಪಶ್ಚಿಮ ಬಂಗಾಳ

ಕೇಂದ್ರಾಡಳಿತ ಪ್ರದೇಶಗಳು
ಪುದುಚೇರಿ
ಲಕ್ಷದ್ವೀಪ
ಲಡಾಖ್
ಜಮ್ಮು–ಕಾಶ್ಮೀರ
ದೆಹಲಿ
ದಮನ್ ಮತ್ತು ದಿಯು
ದಾದ್ರಾ ಮತ್ತು ನಗರ್‌ಹವೇಲಿ
ಚಂಡೀಗಡ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

Comments are closed.