ರಾಷ್ಟ್ರೀಯ

ಕಾನೂನು ಬಾಹಿರವಾಗಿ ಜಮ್ಮು-ಕಾಶ್ಮೀರದ ಕೆಲ ಭೂಪ್ರದೇಶಗಳನ್ನು ಪಾಕ್ ವಶಕ್ಕೆ ತೆಗೆದುಕೊಂಡಿದೆ; ಮೋದಿ

Pinterest LinkedIn Tumblr


ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕೆಲವು ಭೂ ಭಾಗಗಳನ್ನು ಪಾಕಿಸ್ತಾನ ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿದೆ. ಅದು ಈಗಲೂ ಭಾರತವನ್ನು ಬಾಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಮ್ಮ ದೇಶ ಇಬ್ಭಾಗವಾದಾಗ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು ಮತ್ತು ಲಕ್ಷಾಂತರ ಜನ ನಿರಾಶ್ರಿತರಾಗಿದ್ದರು. ಆದರೆ ನಾವು ಪಾಕಿಸ್ತಾನದ ವಿರುದ್ಧ ಹೋಗಿಲ್ಲ. ಅಷ್ಟೇ ಅಲ್ಲ ಜಮ್ಮು-ಕಾಶ್ಮೀರವನ್ನು ಕೈವಶ ಮಾಡಿಕೊಳ್ಳಲು ಸಂಚು ರೂಪಿಸುತ್ತಲೇ ಇತ್ತು. ನಮ್ಮ ಧೈರ್ಯವಂತ ಸೈನಿಕರು ಪಾಕ್ ನ ಎಲ್ಲಾ ಸಂಚನ್ನು ವಿಫಲಗೊಳಿಸಿದ್ದಾರೆ. ಇಂದು ಜಮ್ಮು-ಕಾಶ್ಮೀರ ಭಾರತದ ಭಾಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು.

ಪಾಕಿಸ್ತಾನ ಜಮ್ಮು-ಕಾಶ್ಮೀರದ ಕೆಲವು ಭೂ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದೆ. ಅದನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ. ಅದು ಈಗಲೂ ಭಾರತವನ್ನು ಬಾಧಿಸುತ್ತಿದೆ ಎಂದು ಭಾನುವಾರ ಜಮ್ಮು-ಕಾಶ್ಮೀರದ ರಚೌರಿ ಜಿಲ್ಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ನಿನ್ನೆ ಗಡಿನಿಯಂತ್ರಣ ರೇಖೆ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರಿಗೆ ಸಿಹಿತಿಂಡಿ ಹಂಚಿ, ಇದು ತನ್ನ ಕುಟುಂಬ ಎಂದು ಕರೆದಿದ್ದಲ್ಲದೇ, ಸೈನಿಕರ ಜತೆಯೇ ದೀಪಾವಳಿ ಆಚರಿಸಿದರು.

Comments are closed.