ರಾಷ್ಟ್ರೀಯ

ನಕಲಿ ಕರೆನ್ಸಿ ನೋಟು ಮುದ್ರಣ – ಸೂರತ್ ನ ಐವರು ವಜ್ರ ಪಾಲಿಶ್ ಯುವಕರ ಬಂಧನ.

Pinterest LinkedIn Tumblr

ಗಾಂಧಿನಗರ : ಗುಜರಾತ್ ನಲ್ಲಿ ಖೋಟಾ ನೋಟು ಮುದ್ರಿಸಿ ವಿತರಣೆ ಮಾಡುತ್ತಿದ್ದ ಸೂರತ್ ನ ಐವರು ನಿರುದ್ಯೋಗಿ ಯುವಕರನ್ನು ವಡೋದರಾ ಪೊಲೀಸರು ಬಂಧಿಸಿದ್ದಾರೆ.

ವಜ್ರ ಪಾಲಿಶರ್ ಗಳಾದ ಸಂಜಯ್ ಪರ್ಮಾರ್ (22), ಆಶಿಶ್ ಸುರಾನಿ (25), ಕುಲದೀಪ್ ರಾವಲ್ (22), ಅಭಿಷೇಕ್ ಮಾಂಗುಕಿಯಾ (23) ಮತ್ತು ವಿಶಾಲ್ ಸುರಾನಿ ( 25) ಬಂಧಿತ ಆರೋಪಿಗಳು. ಇವರೆಲ್ಲ ಸೂರತ್ ನ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜಯ್ ಮತ್ತು ಆಶಿಶ್ ಯು-ಟ್ಯೂಬ್ ವಿಡಿಯೋಗಳಿಂದ ಖೋಟಾ ನೋಟುಗಳನ್ನು ಮುದ್ರಿಸಲು ಕಲಿತಿದ್ದರು. ಖೋಟಾ ನೋಟುಗಳನ್ನು ಮುದ್ರಿಸಿ ತಮ್ಮ ಸ್ನೇಹಿತರಿಗೆ ವಿತರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಜ್ರ ಉದ್ಯಮದಲ್ಲಿ ನಿರಂತರ ಆರ್ಥಿಕ ಹಿಂಜರಿತದಿಂದಾಗಿ ಇವರು ಮೂರು ತಿಂಗಳಿನಿಂದ ನಿರುದ್ಯೋಗಿಗಳಾಗಿದ್ದರು ಎನ್ನಲಾಗಿದೆ. ಇವರಲ್ಲಿ ಸಂಜಯ್ ಮಾತ್ರ 10 ನೇ ತರಗತಿ, ಇತರರು ಎಂಟನೇ ತರಗತಿ ಅಥವಾ ಅದಕ್ಕಿಂತ ಕೆಳಗಿನವರೆಗೆ ಅಧ್ಯಯನ ಮಾಡಿದ್ದಾರೆ. ಅವರಿಗೆ ಸೂಕ್ತವಾದ ಯಾವುದೇ ಉದ್ಯೋಗಗಳು ಸಿಗಲಿಲ್ಲ, ಆದ್ದರಿಂದ ಅವರು ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸಲು ಮತ್ತು ಅವುಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು ‘ಎಂದು ತನಿಖಾ ಅಧಿಕಾರಿ ಎಚ್.ಎಂ.ಚೌಹಾನ್ ಹೇಳಿದರು.

ಪೊಲೀಸರು ಸಂಜಯ್ ಮನೆಯಿಂದ ಎರಡು ಪ್ರಿಂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ನೂರರ 91 ಖೋಟಾ ನೋಟುಗಳನ್ನು ಮತ್ತು ಐನೂರ 14 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಈಗಾಗಲೇ 1,60,000 ರೂ.ಗಳ ಖೋಟಾ ನೋಟುಗಳನ್ನು ತಮ್ಮ ಸ್ನೇಹಿತರ ಮೂಲಕ ವಿತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಾರುಕಟ್ಟೆಯಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದ ವಡೋರದಾ ಹಾರ್ನಿ ಪ್ರದೇಶದ ಅಭಿಷೇಕ್ ಸರ್ವೆ (32) ಮತ್ತು ಸುಮಿತ್ ನಂಬಿಯಾರ್ (32) ಎಂಬವರನ್ನು ಎಸ್‌ಒಜಿ ಬಂಧಿಸಿತ್ತು. ಅಭಿಷೇಕ್ ನಿಂದ 500 ರೂ ಮುಖಬೆಲೆಯ 152 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಂಬಿಯಾರ್ ನಿಂದ ರೂ 500 ಮುಖಬೆಲೆಯ 23 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.