ರಾಷ್ಟ್ರೀಯ

ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ

Pinterest LinkedIn Tumblr


ಗುವಾಹಟಿ: ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹರ್ಯಾಣ ಮತ್ತು ವಿಧಾನಸಭಾ ಚುನಾವಣೆಯ ಫಲಿತಾಂಶ ನೋಡಿದಾಗ ಇದು ತಿಳಿಯುತ್ತದೆ ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ತರುಣ್ ಗೊಗೊಯ್ ಹೇಳಿಕೆ ನೀಡಿದ್ದಾರೆ.

ಹರ್ಯಾಣ ಮತ್ತು ಮಹಾರಾಷ್ಟ್ರ ಚುನಾವಣಾ ಫಲಿತಾಂಶದಿಂದ ಮೋದಿ ಅಜೇಯವಲ್ಲ ಎಂದು ಬಹಿರಂಗವಾಗಿದೆ. ಮೋದಿ ಜನಪ್ರಿಯತೆ ಕಳೆದುಕೊಂಡಿದ್ದಾರೆ. ಜನರನ್ನು ಎಂದಿಗೂ ಭಾವನಾತ್ಮಕವಾಗಿ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದರು.

ಲೋಕಸಭಾ ಫಲಿತಾಂಶ ಮತ್ತು ಈ ವಿಧಾನಸಭಾ ಚುನಾವಣೆಗಳ ತುಲನೆ ಮಾಡಿದಾಗ ಕಾಂಗ್ರೆಸ್ ಪ್ರಗತಿ ಸಾಧಿಸಿದ್ದು, ಎಲ್ಲರೂ ಒಟ್ಟಾಗಿ ಸೇರಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಮತ್ತೆ ಅವಕಾಶವಿದೆ ಎಂದರು.

Comments are closed.