ರಾಷ್ಟ್ರೀಯ

ಪ್ರೀತಿ ಮಾಡಿ ಮದುವೆ ನಿರಾಕರಿಸಿದ ಯುವಕನ ಮುಖಕ್ಕೆ ಯುವತಿಯಿಂದ ಆಸಿಡ್!

Pinterest LinkedIn Tumblr


ಆಲಿಗಢ್: ಪ್ರೀತಿ ಮಾಡಿ ಮದುವೆ ನಿರಾಕರಿಸಿದ ಯುವಕನ ಮುಖಕ್ಕೆ ಹುಡುಗಿ ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಆಲಿಗಢ್ ನಲ್ಲಿ ನಡೆದಿದೆ.

ಫೈಜದ್ ಎಂಬ ಹುಡುಗನ ಮೇಲೆ ಆಸಿಡ್ ಎರಚಲಾಗಿದೆ. ಈತ ಕಳೆದ ಆರು ತಿಂಗಳಿಂದ ಒರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಒಂದು ತಿಂಗಳಿಂದ ಆತ ಹುಡುಗಿಯನ್ನು ನಿರಾಕರಿಸುತ್ತಿದ್ದ. ಇದೇ ಕಾರಣಕ್ಕಾಗಿ ಆಕೆ ಆಸಿಡ್ ದಾಳಿ ನಡೆಸಿದ್ದಾಳೆ ಎಂದು ವರದಿಯಾಗಿದೆ.

ಆರೋಪಿ ಹುಡುಗಿಯನ್ನು ಬಂಧಿಸಲಾಗಿದ್ದು, ಸೆಕ್ಷನ್ 326 ಎ ಅಡಿ ಪ್ರಕರಣ ದಾಖಲಾಗಿದೆ.

ದಾಳಿಗೊಳಗಾದ ಫೈಜದ್ ಆಸ್ಪತ್ರೆಗೆ ದಾಖಲಾಗಿದ್ದು, ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.