ರಾಷ್ಟ್ರೀಯ

ಈ ಬಾರಿಯ ಮುಂಗಾರು ಮಳೆಗೆ 2,155 ಮಂದಿ ಬಲಿ, 26 ಲಕ್ಷ ಸಂತ್ರಸ್ತರು

Pinterest LinkedIn Tumblr


ಹೊಸದಿಲ್ಲಿ: ಈ ಬಾರಿಯ ಮುಂಗಾರು ಅವಧಿಯಲ್ಲಿದೇಶಾದ್ಯಂತ ಸುರಿದ ಮಳೆ ಹಾಗೂ ಪ್ರವಾಹದಿಂದ 22 ರಾಜ್ಯಗಳು ತತ್ತರಿಸಿವೆ. ಈ ಋುತುವಿನಲ್ಲಿಮಳೆ ಸಂಬಂಧಿ ಅವಘಡಗಳಿಂದ 2,155 ಮಂದಿ ಮೃತಪಟ್ಟಿದ್ದು, 26 ಲಕ್ಷಕ್ಕೂ ಹೆಚ್ಚು ಜನರು ಮಳೆಯಿಂದ ನಾನಾ ರೀತಿಯಲ್ಲಿ ಸಂತ್ರಸ್ತರಾಗಿದ್ದಾರೆ. ಸೆಪ್ಟೆಂಬರ್‌ 30ಕ್ಕೆ ಕೊನೆಯಾದ ಮುಂಗಾರು ಋುತುವಿನಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರದ ಕುರಿತು ಗೃಹ ಸಚಿವಾಲಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಮುಂಗಾರು ಮಳೆ ಅವಗಡದ ಅಂಕಿ-ಅಂಶ

ಮಳೆ ಸಂಬಂಧಿ ಅವಘಡಗಳಿಗೆ ದೇಶಾದ್ಯಂತ ಬಲಿಯಾದವರ ಸಂಖ್ಯೆ.- 2,155
ದೇಶಾದ್ಯಂತ ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಕಣ್ಮರೆಯಾದವರು- 45
ಗಾಯಗೊಂಡವರು- 803
ಮಳೆ ಹಾಗೂ ಪ್ರವಾಹದಿಂದ ಸಂಕಷ್ಟ ಎದುರಿಸಿದವರ ಪ್ರಮಾಣ. 22 ರಾಜ್ಯಗಳು ತೊಂದರೆ ಎದುರಿಸಿವೆ. – 26 ಲಕ್ಷ
ಮಳೆ ಹಾಗೂ ಪ್ರವಾಹಕ್ಕೆ ಮೃತಪಟ್ಟ ಪಶುಗಳ ಸಂಖ್ಯೆ- 20,000
ಹೆಕ್ಟೇರ್‌ ಜಮೀನಿನಲ್ಲಿ ಬೆಳೆದು ನಿಂತಿದ್ದ ಪೈರು ಹಾನಿ – 14.09 ಲಕ್ಷ
ಧರೆಗುರುಳಿದ ಮನೆಗಳು – 2.23 ಲಕ್ಷ
ಮನೆಗಳಿಗೆ ಭಾಗಶಃ ಹಾನಿ – 2.06 ಲಕ್ಷ

ಇನ್ನೂ ನಿಲ್ಲದ ಮಳೆ
ಅಧಿಕೃತವಾಗಿ ಸೆ.30ರಂದೇ ಮುಂಗಾರು ಕೊನೆಯಾಗಿ ಹಿಂಗಾರು ಋುತು ಶುರುವಾಗಿದ್ದರೂ ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಗಾರು ಅಬ್ಬರ ಇನ್ನೂ ಮುಂದುವರಿದಿದೆ.

ಯಾವ ರಾಜ್ಯದಲ್ಲಿಎಷ್ಟು ಸಾವು?

ಮಹಾರಾಷ್ಟ್ರ 430
ಕರ್ನಾಟಕ 285
ಪಶ್ಚಿಮ ಬಂಗಾಳ 227
ಮಧ್ಯಪ್ರದೇಶ 18
ಕೇರಳ 181
ಗುಜರಾತ್‌ 192
ಬಿಹಾರ 166
ಅಸ್ಸಾಂ 101

Comments are closed.