ರಾಷ್ಟ್ರೀಯ

ಸರ್ಕಾರಕ್ಕೆ 92 ಸಾವಿರ ಕೋಟಿ ಪಾವತಿಸಲು ಸುಪ್ರೀಂನಿಂದ ಟೆಲಿಕಾಂ ಕಂಪನಿಗಳಿಗೆ ಆದೇಶ

Pinterest LinkedIn Tumblr


ನವದೆಹಲಿ: ದೂರಸಂಪರ್ಕ ಇಲಾಖೆಯು ನಿಗದಿಪಡಿಸಿದಂತೆ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಲೆಕ್ಕಾಚಾರದ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಈ ಆದೇಶದಿಂದಾಗಿ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ 92,642 ಕೋಟಿ ಹಣವನ್ನು ಕಟ್ಟಬೇಕಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಏರ್​ಟೆಲ್​ ಮತ್ತು ವೋಡಾಫೋನ್​ ಕಂಪನಿಗಳೇ ಪಾವತಿಸಬೇಕಿದೆ.

ಎಜಿಆರ್​ಗೆ ಸಂಬಂಧಿಸಿದಂತೆ ಟೆಲಿಕಾಂ ಕಂಪನಿ​ಗಳು ಎತ್ತಿದ ಸಮಸ್ಯೆ ಕ್ಷುಲ್ಲಕ ಎಂದು ಹೇಳಿದ ಸುಪ್ರೀಂಕೋರ್ಟ್, ನೈಜ ಶುಲ್ಕಗಳು ಮಾತ್ರವಲ್ಲ, ಬಡ್ಡಿ ಮತ್ತು ಪಾವತಿ ವಿಳಂಬಕ್ಕೆ ದಂಡವನ್ನು ಪಾವತಿಸಬೇಕು ಎಂದು ಸೂಚನೆ ನೀಡಿದೆ.

ಎಜಿಆರ್ ಬಳಕೆ ಮತ್ತು ಪರವಾನಗಿ ಶುಲ್ಕವನ್ನು ಟೆಲಿಕಾಂ ಕಂಪನಿ​ಗಳಿಗೆ ದೂರಸಂಪರ್ಕ ಇಲಾಖೆ ವಿಧಿಸುತ್ತದೆ. ಪಾವತಿಸಬೇಕಾದ ಮೊತ್ತವನ್ನು ಲೆಕ್ಕ ಹಾಕಲು ಪರಿಗಣಿಸಲಾದ ವಿವರಗಳ ಮೇಲೆ ಟೆಲಿಕಾಂ ಕಂಪನಿಗಳು ಮತ್ತು ದೂರ ಸಂಪರ್ಕ ಇಲಾಖೆ ನಡುವೆ ವಿವಾದವಿದೆ.

ನ್ಯಾಯಾಲಯಕ್ಕೆ ಸಲ್ಲಿಸಿದ ಸಂಖ್ಯೆಗಳ ಪ್ರಕಾರ, ಭಾರತಿ ಏರ್​ಟೆಲ್ 21,682 ಕೋಟಿ ಹಾಗೂ ವೋಡಾಫೋನ್ ಐಡಿಯಾ 19,823 ಕೋಟಿ ಹಾಗೂ ರಿಲಾಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ.

Comments are closed.