
ಶ್ರೀನಗರ: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ತಕ್ಕ ತಿರುಗೇಟು ನೀಡಿದ ಭಾರತದ ಸೇನೆ, ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದೆ.
ಭಾರತೀಯ ಸೇನೆಯ ಈ ದಾಳಿಯಲ್ಲಿ ಏಳಕ್ಕೂ ಹೆಚ್ಚು ಉಗ್ರ ಲಾಂಚ್ ಪ್ಯಾಡ್ ಗಳನ್ನು ನಾಶ ಮಾಡಲಾಗಿದ್ದು, ಹಲವು ಉಗ್ರರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ಹಲವು ಪಾಕ್ ಸೈನಿಕರು ಕೂಡಾ ಹತರಾಗಿದ್ದಾರೆಂದು ಎಂದು ವರದಿಯಾಗಿದೆ.
ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆ ನಾಲ್ಕು ಗಂಟೆಯವರಗೆ ಪಾಕಿಸ್ಥಾನ ಗಡಿ ಭಾಗದ ಕುಪ್ವಾರದಲ್ಲಿ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಭಾರತದ ಪ್ರತಿ ದಾಳಿ ನಡೆಸಿದ್ದರೂ ಕೂಡ ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿದ್ದು ಪ್ರತಿಕಾರ ತೀರಿಸಿಕೊಂಡಿದೆ.
Comments are closed.