ಅಂತರಾಷ್ಟ್ರೀಯ

ಗುಜರಾತ್ ನ ಈತ ಅಮೆರಿಕದ FBIನ ಟಾಪ್ 10 ಮೋಸ್ಟ್ ವಾಂಟೆಡ್ ಕ್ರಿಮಿನಲ್!

Pinterest LinkedIn Tumblr


ವಾಷಿಂಗ್ಟನ್: ಗುಜರಾತಿನ ಈ ವ್ಯಕ್ತಿ ಅಮೆರಿಕದ ಎಫ್ ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದು, ಈತನಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಅಮೆರಿಕ, ಭಾರತದಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಗುಜರಾತ್ ನ ಅಹಮ್ಮದಾಬಾದ್ ನಿವಾಸಿ ಭದ್ರೇಶ್ ಕುಮಾರ್ ಪಟೇಲ್ ಅಮೆರಿಕದ ಎಫ್ ಬಿಐನ ಟಾಪ್ 10 ಪಟ್ಟಿಯಲ್ಲಿರುವ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದು, ಈತನನ್ನು ಪತ್ತೆ ಹಚ್ಚಿ ಸುಳಿವು ನೀಡಿದವರಿಗೆ 100,000 ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ.

ಭದ್ರೇಶ್ ಕುಮಾರ್ ಅತೀ ಕ್ರೂರ ಹಂತಕ ಎಂದು ಎಫ್ ಬಿಐ ಪರಿಗಣಿಸಿದೆ. ಈತ ತುಂಬಾ ಅಪಾಯಕಾರಿ ವ್ಯಕ್ತಿಯಾಗಿದ್ದು, ಮೇರಿಲ್ಯಾಂಡ್ ನ ಹಾನೋವರ್ ಡಂಕಿನ್ ಡೋನಟ್ಸ್ ಸ್ಟೋರ್ ನಲ್ಲಿ ತನ್ನ ಪತ್ನಿಯನ್ನು ಅಮಾನುಷ ರೀತಿಯಲ್ಲಿ ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ.

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತಲೆ ಮರೆಸಿಕೊಂಡು ಓಡಾಡುತ್ತಿರುವ ಭದ್ರೇಶ್ ಕುಮಾರ್ ಹೆಸರು 2019ರ ಎಫ್ ಬಿಐ ಪಟ್ಟಿಯಲ್ಲಿಯೂ ನಮೂದಿಸಲಾಗಿದೆ. 2017ರಲ್ಲಿಯೂ ಭದ್ರೇಶ್ ಟಾಪ್ 10 ಕ್ರಿಮಿನಲ್ ಪಟ್ಟಿಯಲ್ಲಿದ್ದ ಎಂದು ವರದಿ ವಿವರಿಸಿದೆ.

ಪಟೇಲ್ (24ವರ್ಷ) ಪತ್ನಿ ಪಾಲಕ್ (21ವರ್ಷ) ಡಂಕಿನ್ ಡೋನಟ್ಸ್ ಸ್ಟೋರ್ ನಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಭದ್ರೇಶ್ ಮತ್ತು ಪಾಲಕ್ ಒಟ್ಟಾಗಿ ಕಿಚನ್ ರೂಂನೊಳಗೆ ಹೋಗಿದ್ದರು. ಈತ ದಿಢೀರ್ ನಾಪತ್ತೆಯಾಗುವವರೆಗೆ ಒಟ್ಟಿಗೆ ಇದ್ದರು. ಕೆಲವೇ ಹೊತ್ತಿನಲ್ಲಿ ಪಟೇಲ್ ಮತ್ತೆ ಕಾಣಿಸಿಕೊಂಡಿದ್ದ. ನಂತರ ಪಟೇಲ್ ಕಿಚನ್ ಕೋಣೆಯಲ್ಲಿದ್ದ ಒವನ್ ಸ್ವಿಚ್ ಆಫ್ ಮಾಡಿ, ಸ್ಟೋರ್ ನಿಂದ ಏನೂ ನಡೆದೇ ಇಲ್ಲ ಎಂಬಂತೆ ಹೊರಬಂದಿದ್ದ. ಆತನ ದೈಹಿಕ ನಡವಳಿಕೆ, ಮುಖಭಾವ ಎಲ್ಲವೂ ಸಹಜವಾಗಿಯೇ ಇದ್ದಿರುವುದಾಗಿ ವರದಿ ವಿವರಿಸಿದೆ.

ಎಫ್ ಬಿಐ ತನಿಖೆ ವೇಳೆ ಈ ಪೈಶಾಚಿಕ ಕೊಲೆ ಕೃತ್ಯ ಬೆಳಕಿಗೆ ಬಂದಿತ್ತು. ಈ ಘಟನೆ ಮೇರಿಲ್ಯಾಂಡ್ ನಾದ್ಯಂತ ಆಘಾತದ ಅಲೆ ಎಬ್ಬಿಸಿತ್ತು.

Comments are closed.