ರಾಷ್ಟ್ರೀಯ

2018-19ರ ಆರ್ಥಿಕ ಅಂಕಿಅಂಶ -ಕೇವಲ 9 ಜನರ ವರ್ಷದ ಆದಾಯ ಮಾತ್ರ 100 ಕೋಟಿಗಿಂತ ಹೆಚ್ಚು

Pinterest LinkedIn Tumblr

ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಆಶ್ಚರ್ಯದ ವಿಷ್ಯವೆಂದ್ರೆ ದೇಶದಲ್ಲಿ ಕೇವಲ 9 ಜನರ ವರ್ಷದ ಆದಾಯ ಮಾತ್ರ 100 ಕೋಟಿಗಿಂತ ಹೆಚ್ಚಿದೆ. ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ 2018-19ರ ಆರ್ಥಿಕ ವರ್ಷದ ಅಂಕಿಅಂಶಗಳು ಇದನ್ನು ಸ್ಪಷ್ಟಪಡಿಸಿದೆ.

ದೇಶದಲ್ಲಿರುವ 9 ಮಂದಿ ವಾರ್ಷಿಕ ಆದಾಯ 100 ರಿಂದ 500 ಕೋಟಿಗಳಷ್ಟಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಆದ್ರೆ ತೆರಿಗೆ ಇಲಾಖೆ ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2017-2018ರ ಆರ್ಥಿಕ ವರ್ಷದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಶೇಕಡಾ 20 ರಷ್ಟು ಹೆಚ್ಚಾಗಿದೆಯಂತೆ.

ದೇಶದಲ್ಲಿ 1 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆದಾಯ ಗಳಿಸುವವರ ಸಂಖ್ಯೆ 97,689 ಇದೆ. 2016-17ರ ವರದಿಯಲ್ಲಿ ಈ ಸಂಖ್ಯೆ 81,344 ಆಗಿತ್ತು. 89,793 ಜನರ ವಾರ್ಷಿಕ ಆದಾಯ ಒಂದರಿಂದ 5 ಕೋಟಿ ರೂಪಾಯಿ ಒಳಗಿದೆ. 5,132 ಜನರ ವಾರ್ಷಿಕ ಆದಾಯ 5 ರಿಂದ 10 ಕೋಟಿ ಒಳಗಿದೆ.

Comments are closed.