ರಾಷ್ಟ್ರೀಯ

2019 ನಾವೀನ್ಯ ಸೂಚ್ಯಂಕದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ.

Pinterest LinkedIn Tumblr

ನವದೆಹಲಿ : 2019ರ ಭಾರತ ನಾವೀನ್ಯ ಸೂಚ್ಯಂಕವನ್ನೂ ನೀತಿ ಆಯೋಗ ಬಿಡುಗಡೆ ಮಾಡಿದೆ. ಇಂತಹ ಸೂಚ್ಯಂಕದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದ್ದರೇ, ಎರಡನೇ ಸ್ಥಾನವನ್ನು ತಮಿಳುನಾಡು, ಮತ್ತು ಮೂರನೇ ಸ್ಥಾನವನ್ನು ಮಹಾರಾಷ್ಟ್ರ ಪಡೆದುಕೊಂಡಿದೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ರಾಜ್ಯಗಳ ಕಾರ್ಯಕ್ಷಮತೆಯ ಪರಾಮರ್ಶೆಯ ಬಗ್ಗೆ ತಿಳಿಸಿಕೊಡುವಂತ ಸೂಚ್ಯಂಕವನ್ನು ಇದಾಗಿದೆ. ಇಂತಹ 2019ರ ಭಾರತ ನಾವೀನ್ಯ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಆನಂತ್ರದಲ್ಲಿ ಎರಡನೇ ಸ್ಥಾನವನ್ನು ತಮಿಳುನಾಡು, ಮತ್ತು ಮೂರನೇ ಸ್ಥಾನವನ್ನು ಮಹಾರಾಷ್ಟ್ರ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಅವರು ಭಾರತದಂತಹ ಬೃಹತ್ ದೇಶದಲ್ಲಿ ಯಾವುದೇ ನೀತಿಯ ರಚನೆ ಮತ್ತು ಅನುಷ್ಠಾನದ ವೇಳೆ ಸ್ಥಳೀಯ ಸಂಗತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಕೇಂದ್ರ ಸರ್ಕಾರದ ನೀತಿಗಳಿಂದ ಆಯಾ ರಾಜ್ಯಗಳಲ್ಲಿ ಜಾರಿಯಲ್ಲಿರುವ ನೀತಿಗಳು ನಾವೀನ್ಯತೆಯನ್ನು ಪ್ರಭಾವಿಸುತ್ತವೆ ಎಂದು ಹೇಳಿದ್ದಾರೆ.

Comments are closed.