ರಾಷ್ಟ್ರೀಯ

ಅಕ್ಟೋಬರ್ 24ರವರೆಗೂ ಚಿದಂಬರಂ ಅವರನ್ನು ಇಡಿ ವಶಕ್ಕೆ ಒಪ್ಪಿಸಿದ ನ್ಯಾಯಾಲಯ

Pinterest LinkedIn Tumblr


ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಅಕ್ರಮ ಹಣ ವಹಿವಾಟು ಪ್ರಕರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆಗಾಗಿ ಅಕ್ಟೋಬರ್ 24ರವರೆಗೂ ಜಾರಿ ನಿರ್ದೇಶನಾಲಯದ ವಶಕ್ಕೆ ದೆಹಲಿ ನ್ಯಾಯಾಲಯ ಗುರುವಾರ ಒಪ್ಪಿಸಿದೆ.

ಇ.ಡಿ. ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು ಚಿದಂಬರಂ ಅವರ ಇಡಿ ವಿಚಾರಣೆಗೆ ಅವಕಾಶ ನೀಡಿದ್ದಾರೆ. ಮತ್ತು ಹಿರಿಯ ನಾಯಕರಾಗಿರುವ ಚಿದಂಬರಂ ಅವರಿಗೆ ಮನೆಯಿಂದ ಊಟ, ಪಾಶ್ಚಿಮಾತ್ಯ ಶೈಲಿಯ ಟಾಯ್ಲೆಟ್ ಮತ್ತು ಔಷಧಗಳನ್ನು ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. 74 ವರ್ಷದ ಕಾಂಗ್ರೆಸ್​ನ ಹಿರಿಯ ಮುಖಂಡರಾಗಿರುವ ಚಿದಂಬರಂ ಅವರನ್ನು ವಿಚಾರಣೆಗೆಂದು 14 ದಿನಗಳ ವಶಕ್ಕೆ ಕೇಳಿ ಇಡಿ ಮನವಿ ಮಾಡಿತ್ತು. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಚಿದಂಬರಂ ಅವರನ್ನು ಇ.ಡಿ. ಅಧಿಕಾರಿಗಳು ತಿಹಾರ್ ಜೈಲಿನಿಂದ ಕರೆದೊಯ್ದರು.

ಸಿಬಿಐ ದಾಖಲಿಸಿರುವ ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಪ್ರಕರಣ ಸಂಬಂಧ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಅಕ್ಟೋಬರ್ 24ರವರೆಗೂ ವಿಸ್ತರಣೆ ಮಾಡಿತ್ತು.

Comments are closed.