ರಾಷ್ಟ್ರೀಯ

ನಿಮಗೆ ಆಗದಿದ್ದರೆ ಹೇಳಿ, ಉಗ್ರರನ್ನು ನಾವು ಮಟ್ಟ ಹಾಕುತ್ತೇವೆ: ಪಾಕ್‍ಗೆ ರಾಜನಾಥ್

Pinterest LinkedIn Tumblr


ಚಂಡೀಗಢ: ಭಯೋತ್ಪಾದನೆಯನ್ನು ನಿಗ್ರಹಿಸಲು ನಿಮ್ಮಿಂದ ಸಾಧ್ಯವಾಗದೆ ಇದ್ದರೆ ಹೇಳಿ ನಾವು ಮಟ್ಟ ಹಾಕುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡದ್ದಾರೆ.

ಹರಿಯಾಣದಲ್ಲಿ ಸೋನಿಪತ್ ನಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು ಜಗತ್ತಿನ ಮುಂದೆ ಭಯೋತ್ಪಾದನೆಯನ್ನು ನಿಗ್ರಹಿಸುವ ಆಶ್ವಾಸನೆಗಳನ್ನು ಮಾತ್ರ ಕೊಡುತ್ತಿದ್ದೀರಾ. ನಿಮ್ಮ ಕೈಯಲ್ಲಿ ಆಗದಿದ್ದರೆ ಹೇಳಿಬಿಡಿ ನಾವು ಉಗ್ರತ್ವವನ್ನು ಮಟ್ಟ ಹಾಕುತ್ತೇವೆ ಎಂದರು.

ಭಾರತದ ವಿಚಾರದಲ್ಲಿ ಪಾಕಿಸ್ತಾನವು ತನ್ನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಈ ಹಿಂದೆ ಎರಡು ಭಾಗವಾಗಿ ವಿಂಗಡಿಸಿದ್ದ ಪಾಕಿಸ್ತಾನವನ್ನು ಈಗ ಹಲವು ಭಾಗಗಳನ್ನಾಗಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Comments are closed.