ರಾಷ್ಟ್ರೀಯ

ಒಂದೂವರೆ ವರ್ಷದ ಕರುವಿನ ಮೇಲೆ ಒಂದು ವರ್ಷಗಳಿಂದ ಅತ್ಯಾಚಾರ

Pinterest LinkedIn Tumblr


ಹೈದರಾಬಾದ್​: ಒಂದೂವರೆ ವರ್ಷದ ಕರುವಿನ ಮೇಲೆ ನಿರಂತರ ಅತ್ಯಾಚಾರ ಮಾಡಿದ ಆರೋಪದ ಮೇಲೆ ನಿಜಾಮಬಾದ್​ ಜಿಲ್ಲೆಯ ನಿಜಾಮ್​ಪುರ್​ ಗ್ರಾಮದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಆರೋಪಿಯನ್ನು ಲಕ್ಷ್ಮಣ್​ ಎಂದು ಗುರುತಿಸಲಾಗಿದ್ದು, ಸುಮಾರು ಒಂದು ವರ್ಷಗಳಿಂದ ಆರೋಪಿ ಈ ಕೃತ್ಯವನ್ನು ನಿರಂತರವಾಗಿ ಎಸಗಿರುವುದಾಗಿ ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾತ್ರಿ ಕರುವನ್ನು ಕಟ್ಟಿದ್ದ ರೈತನ ಮನೆ ಬಳಿ ಅನುಮಾಸ್ಪದವಾಗಿ ಸುತ್ತಾಡುತ್ತಿದ್ದ ಈತನನ್ನು ಸ್ಥಳೀಯರು ಗಮನಿಸಿ, ಹಿಡಿದು ಠಾಣೆಗೆ ಕರೆತಂದರು ಎಂದು ನಾವೀಪೆಟ್​ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಬಿ ವೆಂಕಟೇಶ್ವರಲು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ಸ್ಥಳೀಯರ ಬಳಿ ಸಿಕ್ಕಿಬಿದ್ದಾಗ ನಾನು ಸಗಣಿ ಸಂಗ್ರಹ ಮಾಡಲು ಎಂದು ಹೇಳಿದ್ದಾನೆ. ಆದರೆ, ಆತನ ಉತ್ತರದಿಂದ ಅನುಮಾನಗೊಂಡ ಸ್ಥಳೀಯರು ಈತ ಮೂಖ ಪ್ರಾಣಿಯನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಕರುವನ್ನು ಪಶುವೈದ್ಯಾಲಯಕ್ಕೆ ಕರೆದೊಯ್ದು ಪರೀಕ್ಷಿಸಿದಾಗ ಅದರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಎಸ್​ಐ ವೆಂಕಟೇಶ್ವರಲು ತಿಳಿಸಿದ್ದಾರೆ.

ಸದ್ಯ ಕರುವನ್ನು ಬಾಕಿ ಉಳಿದಿರುವ ಪರೀಕ್ಷಾ ಪ್ರಕ್ರಿಯೆಗೆ ಕಳಹಿಸಲಾಗಿದ್ದು, ಸಂಪೂರ್ಣ ವರದಿ ಇನ್ನೆರಡು ತಿಂಗಳಲ್ಲಿ ದೊರೆಯಲಿದೆ. ಆರೋಪಿಯನ್ನು ಸೋಮವಾರ ನ್ಯಾಯಾಲಯಕ್ಕೆ ಒಪ್ಪಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸ್​ಐ ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್​ 377ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಕಾನೂನು ಸಲಹೆ ಪಡೆದು 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

Comments are closed.