ರಾಷ್ಟ್ರೀಯ

ಕರ್ತಾರ್‍ಪುರ್ ಕಾರಿಡಾರ್ ಯೋಜನೆ ಶೀಘ್ರದಲ್ಲೇ ಲೋಕಾರ್ಪಣೆ

Pinterest LinkedIn Tumblr

ನವದೆಹಲಿ: ಸಿಖ್ ಸಮುದಾಯದ ಪರಮ ಪವಿತ್ರ ಪ್ರಾರ್ಥನಾ ಮಂದಿರ ಹಾಗೂ ಬಹು ನಿರೀಕ್ಷಿತ ಪಾಕಿಸ್ತಾನದ ಕರ್ತಾರ್‍ಪುರ್ ಸಾಹಿಬ್ ಸಂಪರ್ಕಿಸುವ ಕರ್ತಾರ್‍ಪುರ್ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಉದ್ಘಾಟಿಸಲಿದ್ದಾರೆ.

ಸಿಖ್ ಪರಮೋಚ್ಛ ಧರ್ಮಗುರು ಗುರುನಾನಕ್ ದೇವ್ ಅವರ 550 ಜನ್ಮ ಜಯಂತಿ ಪ್ರಯುಕ್ತ ನವೆಂಬರ್ 8ರಂದು ಕರ್ತಾರ್‍ಪುರ್ ಕಾರಿಡಾರ್ ಉದ್ಘಾಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಹಸ್ರ್ಮಿತ್ ಕೌರ್ ಬಾದಲ್ ಟ್ವಿಟ್ ಮಾಡಿದ್ದಾರೆ.

72 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‍ನಿಂದ ಮಾಡಲು ಸಾಧ್ಯವಾಗಿದಿದ್ದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ಸರಿ ಮಾಡುವಲ್ಲಿ ಸಫಲವಾಗಿದೆ ಎಂದು ಆಹಾರ ಸುರಕ್ಷತೆ ಸಚಿವರು ಆದ ಬಾದಲ್ ತಿಳಿಸಿದ್ದಾರೆ.

ಕರ್ತಾರ್‍ಪುರ್ ಕಾರಿಡಾರ್ ಉದ್ಘಾಟನೆ ಸೇರಿದಂತೆ ಗುರುನಾನಕ್ ಅವರ 550ನೇ ಪ್ರಕಾಶ್ ಪುರ್ಬ್ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಳೆದ ವಾರ ಆಹ್ವಾನಿಸಿದ್ದರು.

ಕರ್ತಾರ್ ಪುರ್ ಕಾರಿಡಾರ್ ನಿರ್ಮಾಣ ಸಂಬಂಧ ಕಳೆದ ನವೆಂಬರ್ ತಿಂಗಳಲ್ಲಿ ಭಾರತ- ಪಾಕಿಸ್ತಾನ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. ಪಾಕಿಸ್ತಾನವು ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನಿಯವರನ್ನು ನಿರ್ಲಕ್ಷಿಸಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಿತ್ತಾದರೂ ಈ ಆಹ್ವಾನವನ್ನು ನಿರಾಕರಿಸಿದ ಅವರು, ಸಿಖ್ ಸಮುದಾಯವನ್ನು ಪ್ರತಿನಿಧಿಸಿ ಗುರುನಾನಾಕ್ ಅನಾಯಾಯಿ ಆಗಿ ಮಾತ್ರ ಭಾಗಹಿಸುವುದಾಗಿ ಸ್ಪಷ್ಟಪಡಿಸಿದ್ದರು.

Comments are closed.