ರಾಷ್ಟ್ರೀಯ

ಅರ್ಧ ಗಂಟೆಯಲ್ಲಿ 1.64 ಲಕ್ಷ ಬೆಲೆಯ ಮೊಬೈಲ್‌ ಮಾರಾಟ!

Pinterest LinkedIn Tumblr


ಹೊಸದಿಲ್ಲಿ: ಕೇವಲ 30 ನಿಮಿಷದಲ್ಲಿ 1.64 ಲಕ್ಷ ರೂ. ಬೆಲೆಯ ಮೊಬೈಲ್‌ಗ‌ಳು ಸೋಲ್ಡ್‌ಔಟ್‌ ಆಗುವ ಮೂಲಕ ಸ್ಯಾಮ್ಸಂಗ್‌ ಇಂಡಿಯಾ ಹೊಸ ದಾಖಲೆ ಸೃಷ್ಟಿಸಿದೆ.

ದ.ಕೊರಿಯಾದ ಮೊಬೈಲ್‌ ಕಂಪೆನಿ ಆರಂಭದಲ್ಲಿ ಕೊರಿಯಾದಲ್ಲಿ ಗ್ಯಾಲಕ್ಸಿ ಫೋಲ್ಡ್‌ ಮೊಬೈಲ್‌ ಬಿಡುಗಡೆ ಮಾಡಿದ್ದು, ಈಗ ಭಾರತದಲ್ಲೂ ಬಿಡುಗಡೆ ಮಾಡಿದೆ.
ಕಳೆದ ವಾರ ಅದು ಉದ್ಘಾಟನೆ ಸಂದರ್ಭ 1600 ಕ್ಕೂ ಹೆಚ್ಚು ಮೊಬೈಲ್‌ಗ‌ಳ ಮಾರಾಟ ಮಾಡಿತ್ತು. ಈಗ ಮತ್ತೆ ಮೊಬೈಲ್‌ಗ‌ಳು ಸೋಲ್ಡ್‌ ಔಟ್‌ ಆಗಿದೆ.

ಈ ಮೊಬೈಲ್‌ಗ‌ಳು ಸ್ಯಾಮ್ಸಂಗ್‌ ವೆಬ್‌ಸೈಟ್‌ ಮೂಲಕ ಮಾರಾಟ ಮಾಡುತ್ತಿದೆ. ಇದಕ್ಕೆ 1.64 ಲಕ್ಷ ರೂ.ಗಳನ್ನು ಗ್ರಾಹಕರು ಪಾವತಿ ಮಾಡಿ ಪಡೆಯಬೇಕಾಗಿದ್ದು, ಎಲ್ಲ ಗ್ರಾಹಕರಿಗೆ ಅ.20ರೊಳಗೆ ಮೊಬೈಲ್‌ ಪೂರೈಕೆಗೆ ಕಂಪೆನಿ ಸಿದ್ಧತೆ ಮಾಡಿಕೊಂಡಿದೆ.
ಇದರೊಂದಿಗೆ ಗ್ರಾಹಕರಿಗೆ ದಿನದ 24 ತಾಸೂ ಮೊಬೈಲ್‌ ಹೆಲ್ಪ್ಲೈನ್‌, ಮೊದಲ ವರ್ಷ ಡಿಸ್ಪ್ಲೇಗೆ ವಾರೆಂಟಿ ಸುರಕ್ಷತೆ ನೀಡಲು ಉದ್ದೇಶಿದೆ.

ವಿಶ್ವಾದ್ಯಂತ ಹೊಸ ತಲೆಮಾರಿನ ಈ ಫೋಲ್ಡ್‌ ಮೊಬೈಲ್‌ ಹವಾ ಸೃಷ್ಟಿಸಿದೆ. ಇದರಲ್ಲಿ 12 ಜಿಬಿ ರ್ಯಾಮ್‌ ಮತ್ತು 512 ಜಿ.ಬಿ. ಹಾರ್ಡ್‌ ಡ್ರೈವ್‌ ಇದೆ.

ಮುಂಭಾಗದಲ್ಲಿ 4.6 ಇಂಚಿನ ಸ್ಕ್ರೀನ್‌ ಹೊಂದಿದ್ದು, ಇದನ್ನು ಪುಸ್ತಕದ ರೀತಿ ತೆರೆದರೆ ಟ್ಯಾಬ್‌ ರೀತಿ 7.3 ಇಂಚಿನ ಸ್ಕ್ರೀನ್‌ ಲಭ್ಯವಾಗುತ್ತದೆ.

ಮೊಬೈಲ್‌ನಲ್ಲಿ ಸ್ನಾಪ್‌ಡ್ರಾಗನ್‌ 855 ಚಿಪ್‌ಸೆಟ್‌, ಮಡಚಿದರೆ 10 ಮೆಗಾಪಿಕ್ಸೆಲ್‌ ಕೆಮರಾ, ತೆರೆದರೆ 16 ಮೆಗಾಪಿಕ್ಸೆಲ್‌ನ ಅಲ್ಟ್ರಾ ವೈಡ್‌ ಕೆಮರಾ, 12 ಮೆಗಾಪಿಕ್ಸೆಲ್‌ನ ವೈಡ್‌ ಆ್ಯಂಗಲ್‌ ಮತ್ತು 12 ಮೆಗಾಪಿಕ್ಸೆಲ್‌ನ ಟೆಲಿಫೋಟೋ ಕೆಮರಾ ಲಭ್ಯವಾಗುತ್ತದೆ. 4380 ಎಂಎಎಚ್‌ನ ಬ್ಯಾಟರಿಯನ್ನು ಮೊಬೈಲ್‌ ಹೊಂದಿದೆ.

Comments are closed.