ರಾಷ್ಟ್ರೀಯ

ಆರ್‌ಟಿಐ ಅರ್ಜಿ ಸಲ್ಲಿಸುವ ಅಗತ್ಯವನ್ನೇ ಸರ್ಕಾರ ಕಡಿಮೆ ಮಾಡಿದೆ: ಅಮಿತ್ ಶಾ

Pinterest LinkedIn Tumblr


ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಷ್ಟು ಸಾಧ್ಯವೋ ಅಷ್ಟು ಮಾಹಿತಿಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಮೂಲಕ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಅರ್ಜಿ ಸಲ್ಲಿಸಬೇಕಾದ ಅಗತ್ಯತೆಯನ್ನೇ ಕಡಿಮೆ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಶನಿವಾರ ನವದೆಹಲಿಯಲ್ಲಿ ಕೇಂದ್ರ ಮಾಹಿತಿ ಆಯೋಗದ 14ನೇ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, “ಆರ್‌ಟಿಐ ಅರ್ಜಿ ಸಲ್ಲಿಕೆಗೆ ಸಾಕಷ್ಟು ಅವಕಾಶಗಳಿದ್ದರೂ, ಅರ್ಜಿಗಳ ಸಂಖ್ಯೆ ಕಡಿಮೆಯಾಗಿದೆ ಎಂದರೆ, ಸರ್ಕಾರದ ಕೆಲಸವು ಜನರಿಗೆ ತೃಪ್ತಿ ತಂದಿದೆ ಎಂದರ್ಥ. ಹೆಚ್ಚಿನ ಸಂಖ್ಯೆಯ ಆರ್‌ಟಿಐ ಅರ್ಜಿಗಳು ಸರ್ಕಾರದ ಯಶಸ್ಸನ್ನು ಪ್ರತಿನಿಧಿಸುವುದಿಲ್ಲ’ ಎಂದಿದ್ದಾರೆ.

ಪ್ರಧಾನಿ ಮೋದಿ ಪರಿಚಯಿಸಿರುವ ವ್ಯವಸ್ಥೆಯಿಂದಾಗಿ, ಜನರು ಆರ್‌ಟಿಐ ಅರ್ಜಿ ಸಲ್ಲಿಸದೆಯೇ, ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿಯನ್ನೂ ಆನ್‌ಲೈನ್‌ ಮೂಲಕವೇ ತಿಳಿದುಕೊಳ್ಳಬಹುದಾಗಿದೆ ಎಂದಿದ್ದಾರೆ ಶಾ.
ಇದೇ ವೇಳೆ, ಆಡಳಿತಕ್ಕೆ ತಂತ್ರಜ್ಞಾನಗಳ ಬಳಕೆ ಕುರಿತು ಮಾತನಾಡಿದ ಅಮಿತ್‌ ಶಾ, ಕೇದಾರನಾಥ ಮರುನಿರ್ಮಾಣ ಯೋಜನೆಯ ಮೇಲ್ವಿಚಾರಣೆಯನ್ನು ಡ್ರೋನ್‌ ಮೂಲಕ ನಡೆಸಿದ ಕುರಿತೂ ವಿವರಿಸಿದ್ದಾರೆ.

Comments are closed.