ರಾಷ್ಟ್ರೀಯ

700 ಕೋಟಿ ವಂಚನೆ ಪ್ರಕರಣ: ಶಿವಿಂದರ್ ಮೋಹನ್ ಸಿಂಗ್ ಬಂಧನ

Pinterest LinkedIn Tumblr


ನವದೆಹಲಿ: ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಬುಧವಾರದಂದು ರಿಲಿಗೇರ್‌ನಿಂದ 700 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ರಾನ್‌ಬಾಕ್ಸಿ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಸೇರಿದಂತೆ ನಾಲ್ವರನ್ನು ಬಂಧಿಸಿದೆ. ಶಿವಿಂದರ್ ಮೋಹನ್ ಸಿಂಗ್, ಅವರ ಸಹೋದರ ಮಾಲ್ವಿಂದರ್ ಮೋಹನ್ ಸಿಂಗ್ ಮತ್ತು ಇತರ ಮೂವರ ವಿರುದ್ಧ ರಿಲಿಗೇರ್ ದೂರು ದಾಖಲಿಸಿದೆ.

ರಿಲಿಗೇರ್ ಎಂಟರ್‌ಪ್ರೈಸಸ್ ಮತ್ತು ಅದರ ಅಂಗಸಂಸ್ಥೆ ರಿಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್ (ಆರ್‌ಎಫ್‌ಎಲ್) ಗೆ ಸಂಬಂಧಿಸಿದ ಮೋಸ, ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಶಿವಿಂದರ್ ಮೋಹನ್ ಸಿಂಗ್ ಮತ್ತು ಮಾಲ್ವಿಂದರ್ ಮೋಹನ್ ಸಿಂಗ್ ಅವರನ್ನು 2019 ರ ಮಾರ್ಚ್‌ನಲ್ಲಿ ದೆಹಲಿ ಪೊಲೀಸರ ಅರ್ಥಶಾಸ್ತ್ರ ಅಪರಾಧ ವಿಭಾಗವು ದಾಖಲಿಸಿತ್ತು.

ಪೊಲೀಸರಿಗೆ ನೀಡಿದ ದೂರಿನಲ್ಲಿ ಹಣಕಾಸಿನ ವಹಿವಾಟಿನ ಚಕ್ರವ್ಯೂಹದ ಮೂಲಕ ನೂರಾರು ಕೋಟಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ 2008 ರಲ್ಲಿ ರಾನ್‌ಬಾಕ್ಸಿ ಖರೀದಿಸಿದ ಜಪಾನಿನ ಕಂಪನಿ ಡೈಚಿ ಸ್ಯಾಂಕ್ಯೊಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಿಂಗ್ ಸಹೋದರರು ಸಿಲುಕಿಕೊಂಡಿದ್ದರು. ಸಿಂಗ್ ಸಹೋದರರು ದಾರಿತಪ್ಪಿಸಿ ಮರೆಮಾಚಿದ್ದಾರೆ ಎಂದು ಆರೋಪಿಸಿ ಡೈಚಿ ಸಾಂಕಿಯೊ ನಂತರ ಸಿಂಗಾಪುರ ಮಧ್ಯಸ್ಥಿಕೆ ನ್ಯಾಯಾಧಿಕರಣದಲ್ಲಿ ದೂರು ಸಲ್ಲಿಸಿದ್ದರು. ರಾನ್‌ಬಾಕ್ಸಿ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮತ್ತು ನ್ಯಾಯಾಂಗ ಇಲಾಖೆಯಿಂದ ತನಿಖೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ರಾನ್‌ಬಾಕ್ಸಿ ಸಹೋದರರ ವಿರುದ್ಧ ಸಿಂಗಾಪುರ ನ್ಯಾಯಮಂಡಳಿಯು ನೀಡಿದ ಮಧ್ಯಸ್ಥಿಕೆಯಲ್ಲಿ ಅದಕ್ಕೆ ನೀಡಲಾದ 3,500 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಕೋರಿ ಡೈಚಿ ಸಂಕ್ಯೊ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.

Comments are closed.