ರಾಷ್ಟ್ರೀಯ

ರಫೇಲ್​ ಚಕ್ರದಡಿ ನಿಂಬೆ ಹಣ್ಣು ಇಟ್ಟು ಪೂಜೆ ಸಲ್ಲಿಸಿದ ರಾಜನಾಥ್​ ಸಿಂಗ್​…

Pinterest LinkedIn Tumblr


ಮೆರಿಗ್ನಾಕ್: ಒಟ್ಟು 36 ರಫೇಲ್​ ಯುದ್ಧವಿಮಾನಗಳಲ್ಲಿ ಒಂದು ಯುದ್ಧ ವಿಮಾನವನ್ನು ಇಂದು ವಿಜಯದಶಮಿಯ ದಿನದಂದು ಭಾರತಕ್ಕೆ ಫ್ರಾನ್ಸ್​ ಹಸ್ತಾಂತರ ಮಾಡಿದೆ. ಫ್ರಾನ್ಸ್​ನ ಮೆರಿಗ್ನಾಕ್ಸ್​ನಲ್ಲಿ ಡಸಾಲ್ಟ್​ ಏವಿಯೇಷನ್​ನ ಸಿಇಒ ಎರಿಕ್ ಟ್ರಾಪ್ಪಿಯರ್​​ರಿಂದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ವಿಮಾನವನ್ನು ಸ್ವೀಕರಿಸಿದ್ದಾರೆ.

ಆದರೆ ಹೀಗೆ ಸ್ವೀಕರಿಸುವ ವೇಳೆ ರಾಜನಾಥ್ ಸಿಂಗ್ ಅವರು ಭಾರತೀಯ ಸಂಪ್ರದಾಯದಂತೆ ರಫೇಲ್​ ಯುದ್ಧವಿಮಾನಕ್ಕೆ ಪೂಜೆ ಸಲ್ಲಿಸಿದ್ದಾರೆ.

ರಫೇಲ್​ ವಿಮಾನದ ಚಕ್ರಗಳಡಿ ನಿಂಬೆ ಹಣ್ಣುಗಳನ್ನು ಇಟ್ಟು, ತೆಂಗಿನ ಕಾಯಿ, ಸೇವಂತಿಗೆ ಹೂವುಗಳೊಂದಿಗೆ ವಿಮಾನಕ್ಕೆ ಪೂಜೆ ಸಲ್ಲಿಸಿದರು. ಅಲ್ಲದೆ, ಕುಂಕುಮದಿಂದ ಆ ರಫೇಲ್​ ಮೇಲೆ ಓಂ ಎಂದು ಬರೆಯುವ ಮೂಲಕ ಭಾರತೀಯ ಸಂಸ್ಕೃತಿಯಂತೆ ಪೂಜೆ ಸಲ್ಲಿಸಿದರು.

ಶಾಸ್ತ್ರ ಪೂಜೆ ಸಲ್ಲಿಸಿದ ಬಳಿಕ ರಫೇಲ್​ ಯುದ್ಧವಿಮಾನವನ್ನು ಸ್ವೀಕರಿಸಿದ ರಾಜನಾಥ್ ಸಿಂಗ್​ ಅವರು, ಈ ದಿನ ಐತಿಹಾಸಿಕ ದಿನ. ನಮ್ಮ ವಾಯು ಪಡೆಗೆ ರಫೇಲ್​ ಇನ್ನಷ್ಟು ಬಲ ತುಂಬಲಿದೆ ಎಂದು ಹೇಳಿದರು. ಹಾಗೇ ರಫೇಲ್​ ಯುದ್ಧ ವಿಮಾನದಲ್ಲಿ ಒಂದು ಸುತ್ತು ಹಾರಾಟ ನಡೆಸಿದ ಅವರು, ಇದು ಸ್ಮರಣೀಯ ಕ್ಷಣ ಎಂದು ಹೇಳಿದರು.

Comments are closed.