ರಾಷ್ಟ್ರೀಯ

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಡಿಸಿ ಕಚೇರಿ ಮೇಲೆ ಗ್ರೈನೇಡ್ ದಾಳಿ; 10 ಮಂದಿಗೆ ಗಾಯ

Pinterest LinkedIn Tumblr

ಕಾಶ್ಮೀರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮೇಲೆ ಭಯೋತ್ಪಾದಕರು ಗ್ರೈನೇಡ್ ದಾಳಿ ನಡೆಸಿದ್ದು ಪರಿಣಾಮ 10 ಮಂದಿ ಗಾಯಗೊಂಡಿದ್ದಾರೆ.

ಅನಂತ್ ನಾಗ್ ಪಟ್ಟಣದ ಸಂಕೀರ್ಣದ ಹೊರಗಿನ ಭದ್ರತಾ ಗಸ್ತಿನ ಮೇಲೆ ಭಯೋತ್ಪಾದಕರು ಗ್ರೈನೇಡ್ ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕರು ಎಸೆದ ಗ್ರೆನೇಡ್ ಉದ್ದೇಶಿತ ಗುರಿ ತಪ್ಪಿ ರಸ್ತೆಬದಿಯಲ್ಲಿ ಸ್ಫೋಟಗೊಂಡಿದ್ದರಿಂದ ಎಂಟು ಪಾದಚಾರಿಗಳು, ಪೊಲೀಸ್ ಮತ್ತು ಸ್ಥಳೀಯ ಪತ್ರಕರ್ತರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಗ್ರೈನೇಡ್ ದಾಳಿ ಸದ್ಯ ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಘಟನಾ ಸ್ಥಳದ ಸುತ್ತ ಭದ್ರತಾ ಪಡೆಗಳು ಸುತ್ತುವರೆದಿದ್ದು ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

Comments are closed.