ರಾಷ್ಟ್ರೀಯ

6,500 ಕೋಟಿ ಸಾಲ, ವಂಚನೆ ಪ್ರಕರಣ; ವಾಧ್ವಾನ್ ಸಹೋದರರ ಬಂಧನ

Pinterest LinkedIn Tumblr


ನವದೆಹಲಿ: ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್(ಪಿಎಂಸಿ) ಬ್ಯಾಂಕ್ ನಿಂದ 6,500 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿಯಾದ ಎಚ್ ಡಿಐಎಲ್ (ಹೌಸಿಂಗ್ ಡೆವಲಪ್ ಮೆಂಟ್ ಆ್ಯಂಡ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್) ನ ರಾಕೇಶ್ ಕುಮಾರ್ ವಾಧ್ವಾನ್ ಹಾಗೂ ಸಾರಂಗ್ ವಾಧ್ವಾನ್ ನನ್ನು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ರಾಕೇಶ್ ಕುಮಾರ್ ಎಚ್ ಡಿಐಎಲ್ ನ ಎಕ್ಸಿಕ್ಯೂಟಿವ್ ಅಧ್ಯಕ್ಷ, ಸಾರಂಗ್ ವಾಧ್ವಾನ್ ಆಡಳಿತ ನಿರ್ದೇಶಕರಾಗಿದ್ದು, ಪಿಎಂಸಿ ಬ್ಯಾಂಕ್ ನಿಂದ 6,500 ಕೋಟಿ ರೂಪಾಯಿ ಸಾಲ ಪಡೆದು, ಅದನ್ನು ಮರುಪಾವತಿಸದೇ ಅವ್ಯವಹಾರ ನಡೆಸಿರುವುದಾಗಿ ಅಧಿಕಾರಿಗಳು ಆರೋಪಿಸಿದ್ದಾರೆ.

ಪಿಎಂಸಿ ಬ್ಯಾಂಕ್ ಪ್ರಕರಣ ಬಯಲಾದ ನಂತರ ಮಹಾರಾಷ್ಟ್ರ ಸರಕಾರ ಇಬ್ಬರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ದೇಶ ಬಿಟ್ಟು ತೆರಳದಂತೆ ಹಾಗೂ ಜಲಮಾರ್ಗದ ಮೂಲಕ ಪರಾರಿಯಾಗದಂತೆ ತಡೆಯುವ ನಿಟ್ಟಿನಲ್ಲಿ ವಲಸೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

ಆರು, ಏಳು ವರ್ಷಗಳಿಂದ ಬ್ಯಾಂಕ್ ಈ ವಿಷಯವನ್ನು ಮುಚ್ಚಿಟ್ಟಿದ್ದು, ಆರ್ ಬಿಐಗೂ ಮಾಹಿತಿ ನೀಡಿರಲಿಲ್ಲವಾಗಿತ್ತು. ಅಲ್ಲದೇ 6,500 ಕೋಟಿ ರೂ. ಸಾಲವನ್ನು ಮುಚ್ಚಿಡುವ ನಿಟ್ಟಿನಲ್ಲಿ ಪಿಎಂಸಿ ಬ್ಯಾಂಕ್ ನ ಆರು ಅಧಿಕಾರಿಗಳು 21 ಸಾವಿರ ನಕಲಿ ಖಾತೆ ತೆಗೆದಿದ್ದರು.

Comments are closed.