ರಾಷ್ಟ್ರೀಯ

ಭಾರೀ ಮಳೆಯಿಂದಾಗಿ 3 ದಿನಗಳಿಂದ ಮನೆಯಲ್ಲಿ ಸಿಲುಕಿದ್ದ ಬಿಹಾರ ಡಿಸಿಎಂ ಸುಶೀಲ್ ಮೋದಿ ರಕ್ಷಣೆ

Pinterest LinkedIn Tumblr


ಪಾಟ್ನ:ಭಾರೀ ಮಳೆಯಿಂದಾಗಿ ಕಳೆದ ಮೂರು ದಿನಗಳಿಂದ ಮನೆಯಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ಅವರ ಮನೆಯವರು ಹಾಗೂ ನೂರಾರು ಜನರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ಎರಡು ದಶಕಗಳಲ್ಲಿಯೇ ಸುರಿಯದಷ್ಟು ಭಾರೀ ಮಳೆ ಬಿಹಾರದಲ್ಲಿ ಕಳೆದ ಮೂರು ದಿನಗಳಿಂದ ಬಂದ ಕಾರಣ ರಸ್ತೆ, ಆಸ್ಪತ್ರೆ, ಮನೆ, ಶಾಲೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿದ್ದವು. ಬಿಹಾರ ರಾಜಧಾನಿ ಪಾಟ್ನ ಕೂಡಾ ತೇಲುವ ನಗರದಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಕಳೆದ 48 ಗಂಟೆಗಳ ಕಾಲ ಎಡೆಬಿಡದೆ ಸುರಿದ ವರುಣನ ಆರ್ಭಟದಿಂದಾಗಿ ಪಾಟ್ನ ರಾಜೇಂದ್ರ ನಗರದಲ್ಲಿರುವ ತಮ್ಮ ಮನೆಯಲ್ಲಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹಾಗೂ ಕುಟುಂಬ ಸದಸ್ಯರು ಸಿಲುಕಿ ಹಾಕಿಕೊಂಡಿದ್ದರು. ಕೊನೆಗೂ ಎನ್ ಡಿಆರ್ ಎಫ್ ತಂಡ ರಕ್ಷಿಸಿತ್ತು ಎಂದು ವರದಿ ತಿಳಿಸಿದೆ.

ಬಿಹಾರದಲ್ಲಿ ಧಾರಾಕಾರ ಮಳೆಗೆ ಈವರೆಗೆ 29ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2 ಲಕ್ಷ ಮನೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿ ವಿವರಿಸಿದೆ.

Comments are closed.