ರಾಷ್ಟ್ರೀಯ

ಆಧಾರ್​ ಕಾರ್ಡ್ ಗೆ ಪ್ಯಾನ್​ ಕಾರ್ಡ್ ಲಿಂಕ್​ ಮಾಡಲು ಗಡುವು ವಿಸ್ತರಣೆ

Pinterest LinkedIn Tumblr


ನವದೆಹಲಿ (ಸೆ.28): ಆಧಾರ್​ ಜೊತೆ ಪ್ಯಾನ್​ ಕಾರ್ಡ್​ ಲಿಂಕ್​ ​ ಮಾಡಲು ಇದ್ದ ಅವಧಿಯನ್ನು ಇನ್ನು ಮೂರು ತಿಂಗಳು ಕಾಲ ವಿಸ್ತರಣೆ ಮಾಡಿ ಸರ್ಕಾರ ಆದೇಶ ನೀಡಿದೆ.

ಈ ಕುರಿತು ಮಾತನಾಡಿದ ಹಣಕಾಸು ಸಚಿವರು ಪ್ಯಾನ್​ ಕಾರ್ಡನ್ನು​ ಜೊತೆ ಆಧಾರ್​ ಕಾರ್ಡ್​ ಜೊತೆ ಲಿಂಕ್​ ಮಾಡಲು ಇದೇ 30ಕ್ಕೆ ಅಂತಿಮ ಗಡುವು ನೀಡಿ ಈ ಹಿಂದೆ ಆದೇಶ ಮಾಡಲಾಗಿತ್ತು. ಆದರೆ ಈಗ ಈ ಅವಧಿಯನ್ನು ಇನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್​ 31ರವರೆಗೆ ಈ ಅವಕಾಶವಿದ್ದು, ಇನ್ನು ಕೂಡ ಆಧಾರ್​ ಲಿಂಕ್ ಮಾಡದವರಿಗೆ ಕಾಲಾವಕಾಶ ಸಿಕ್ಕಿದೆ

ಈಗಾಗಲೇ ಆರು ಬಾರಿ ಈ ಅವಧಿಯನ್ನು ವಿಸ್ತರಣಾ ಅವಧಿಯನ್ನು ಮುಂದೂಡಲಾಗಿದೆ. ಈಗ ಏಳನೇ ಬಾರಿ ಈಗ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ.

ತೆರಿಗೆದಾರರು ಇ ಫೈಲ್​ ಮಾಡಲು ಆಧಾರ್​ ಕಾರ್ಡ್​ಗೆ ಪ್ಯಾನ್​ ಜೋಡಣೆ ಕಡ್ಡಾಯವಾಗಿದ್ದು, ಈ ಎರಡು ಗುರುತಿನ ಚೀಟಿಗಳ ಸಂಪರ್ಕ ಮಾಡಬೇಕು ಎಂದು ಸುಪ್ರೀಂಕೋರ್ಟ್​ ತಿಳಿಸಿತ್ತು.

Comments are closed.