ರಾಷ್ಟ್ರೀಯ

ಹನಿಟ್ರ್ಯಾಪ್: ಮಾಜಿ ಸಚಿವರು,VIPಗಳ ಮಂಚಕ್ಕೆ 24 ಕಾಲೇಜು ವಿದ್ಯಾರ್ಥಿನಿಯರು

Pinterest LinkedIn Tumblr


ಇಂದೋರ್: ಹನಿ ಟ್ರ್ಯಾಪ್ ಹಗರಣದ ಕಿಂಗ್ ಪಿನ್ ಶ್ವೇತಾ ಜೈನ್ ವಿಶೇಷ ತನಿಖಾ ತಂಡದ ವಿಚಾರಣೆ ವೇಳೆ ಸ್ಫೋಟಕ ಸತ್ಯವನ್ನು ಬಾಯ್ಬಿಟ್ಟಿದ್ದು, ಸರಕಾರದ ಗುತ್ತಿಗೆ ಪಡೆಯಲು ಮಧ್ಯಪ್ರದೇಶದ 8 ಮಂದಿ ಮಾಜಿ ಸಚಿವರುಗಳು ಹಾಗೂ 12 ಉನ್ನತ ಮಟ್ಟದ ಅಧಿಕಾರಿಗಳಿಗೆ ಎರಡು ಡಜನ್ ಗಿಂತಲೂ ಅಧಿಕ ಕಾಲೇಜು ಹುಡುಗಿಯರನ್ನು ಬಳಸಿಕೊಂಡಿದ್ದರು ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.

ಹನಿಟ್ರ್ಯಾಪ್ ನ ಮುಖ್ಯ ಉದ್ದೇಶ ನೂರಾರು ಕೋಟಿ ರೂಪಾಯಿ ಮೊತ್ತದ ಸರಕಾರಿ ಗುತ್ತಿಗೆಯನ್ನು ಪಡೆಯುವುದಾಗಿತ್ತು. ಇದರಲ್ಲಿ ವಿಐಪಿಗಳನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡಲಾಗುತ್ತಿತ್ತು ಎಂದು ಶ್ವೇತಾ ತಪ್ಪೊಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಷ್ಠಿತ ಕಂಪನಿಗಳು ಗುತ್ತಿಗೆ ಪಡೆಯಲು ಕಮಿಷನ್ ಆಧಾರದ ಮೇಲೆ ಶ್ವೇತಾ ಮತ್ತು ಆಕೆಯ ಸಹಾಯಕಿ ಆರತಿ ದಯಾಳ್ ಗೆ ದುಂಬಾಲು ಬೀಳುತ್ತಿದ್ದರಂತೆ. ಇದಕ್ಕಾಗಿ ಆಕೆ ಐಎಎಸ್, ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳನ್ನು ಬಲೆಗೆ ಹಾಕಿಕೊಳ್ಳಲು ಕಾಲೇಜು ಯುವತಿಯರನ್ನು ಮಂಚಕ್ಕೆ ಕಳುಹಿಸಲು ಬೇಡಿಕೆ ಇಡುತ್ತಿದ್ದರೆಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಮಧ್ಯಮ ವರ್ಗದ ಕಾಲೇಜು ಯುವತಿಯರನ್ನು ಅವರ ತಂದೆ ವಯಸ್ಸಿನ ವ್ಯಕ್ತಿಗಳ ಜತೆ ದೈಹಿಕ ಸಂಬಂಧಕ್ಕಾಗಿ ಕಳುಹಿಸಲಾಗುತ್ತಿತ್ತು ಎಂದು ಶ್ವೇತಾ ವಿಚಾರಣೆಯಲ್ಲಿ ತಿಳಿಸಿದ್ದಾಳೆ. ಪ್ರತಿಷ್ಠಿತ ಕಾಲೇಜಿನ ಯುವತಿಯರನ್ನೇ ಕೆಲವೊಮ್ಮೆ ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿಯೂ ಆಕೆ ವಿವರಿಸಿದ್ದಾಳೆ ಎಂದು ವರದಿ ಹೇಳಿದೆ.

Comments are closed.