ರಾಷ್ಟ್ರೀಯ

ಮತ್ತೆ ಏರಿಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ನೋಡಿ…..!

Pinterest LinkedIn Tumblr

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಶುಕ್ರವಾರ ಪೆಟ್ರೋಲ್ ಲೀಟರ್ ಗೆ 80 ರೂಪಾಯಿ ಮತ್ತು ಡೀಸೆಲ್ 70 ರೂಪಾಯಿ 55 ಪೈಸೆಯಾಗಿದೆ.

ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಪೆಟ್ರೋಲ್ ದರ 15 ಪೈಸೆ ಹೆಚ್ಚಳವಾಗಿದ್ದು ಚೆನ್ನೈಯಲ್ಲಿ 16 ಪೈಸೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 76 ರೂಪಾಯಿ 88 ಪೈಸೆಯಾಗಿದೆ. ನಿನ್ನೆ ಇಲ್ಲಿ ಲೀಟರ್ ಗೆ 76 ರೂಪಾಯಿ 73 ಪೈಸೆಯಿತ್ತು. ಒಟ್ಟಾರೆ ಕರ್ನಾಟಕದಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 76 ರೂಪಾಯಿ 53 ಪೈಸೆಯಿದೆ.

ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರುಗಳಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 10 ಪೈಸೆ ಏರಿಕೆಯಾದರೆ, ಮುಂಬೈ ಮತ್ತು ಚೆನ್ನೈಯಲ್ಲಿ 11 ಪೈಸೆ ಹೆಚ್ಚಾಗಿದೆ. ಇಂದು ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 69 ರೂಪಾಯಿ 53 ಪೈಸೆಯಿದೆ.

Comments are closed.