ರಾಷ್ಟ್ರೀಯ

ಅನರ್ಹರ ಶಾಸಕರ ಪ್ರಕರಣದಲ್ಲಿ ದಢೀರ್ ಬದಲಾವಣೆ!

Pinterest LinkedIn Tumblr


ನವದೆಹಲಿ: ಕಾಂಗ್ರೆಸ್, ಜೆಡಿಎಸ್ ಶಾಸಕರ ಅನರ್ಹತೆ ರದ್ದು ಕೋರಿದ್ದ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಇದೀಗ ದಢೀರ್ ಬದಲಾವಣೆ ಕಂಡಿದೆ.

ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರು ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಆದರೆ ಜುಲೈನಲ್ಲಿ ಅನರ್ಹ ಶಾಸಕರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಸ್ಪೀಕರ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದಿಸಿದ್ದರು. ಈಗ ಸ್ಪೀಕರ್ ಪರ ವಕೀಲರಾಗಿ ಹಿರಿಯ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದಾರೆ.

ಈಗ ಸ್ಪೀಕರ್ ಕಚೇರಿ ಪರ ವಕೀಲರಾಗಿ ವಾದ ಮಂಡಿಸುತ್ತಿರುವ ತುಷಾರ್ ಮೆಹ್ತಾ ಅವರು, ಅನರ್ಹ ಶಾಸಕರ ವಾದವನ್ನೇ ಬೆಂಬಲಿಸಿ ಪ್ರತಿವಾದ ಮಂಡಿಸಿರುವುದು ಪ್ರಕರಣದ ವಿಚಾರಣೆಗೆ ತಿರುವು ಪಡೆದುಕೊಂಡಿದೆ.

ಜುಲೈ ತಿಂಗಳಿನಲ್ಲಿ ಸ್ಪೀಕರ್ ವಕೀಲರಾಗಿ ವಾದ ಮಂಡಿಸಿದ್ದ ಅಭಿಷೇಕ್ ಮನು ಸಿಂಘ್ವಿ ಅನರ್ಹ ಶಾಸಕರ ನಿಲುವನ್ನು ವಿರೋಧಿಸಿದ್ದರು. ಈಗ ತುಷಾರ್ ಮೆಹ್ತಾ ಅವರು ಅನರ್ಹ ಶಾಸಕರ ವಾದವನ್ನೇ ಬೆಂಬಲಿಸಿ ವಾದಿ ಮಂಡಿಸಿದ್ದಾರೆ.

Comments are closed.