ಅಂತರಾಷ್ಟ್ರೀಯ

ಟೆಕ್ಸಾಸ್ ಸೆನೆಟರ್ ರ ಪತ್ನಿಗೆ ಕ್ಷಮೆಯಾಚಿಸಿದ ಮೋದಿ

Pinterest LinkedIn Tumblr


ಹ್ಯೂಸ್ಟನ್: ಅಮೇರಿಕಾದ ಹ್ಯೂಸ್ಟನ್ ನಗರದಲ್ಲಿ ರವಿವಾರ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಗಮನ ಸೆಳೆದರು. ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡಾ ಅದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ನೀವು ನೋಡಿರಬಹುದು. ಆದರೆ ಈಗಿರುವ ಸುದ್ದಿಯೇನೆಂದರೆ ಕಾರ್ಯಕ್ರಮದ ನಂತರ ನರೇಂದ್ರ ಮೋದಿಯವರು ಅಮೇರಿಕಾದ ಸೆನೆಟರ್ ಓರ್ವರ ಪತ್ನಿಯ ಬಳಿ ಕ್ಷಮೆ ಕೇಳಿದ್ದರು.

ಟೆಕ್ಸಾಸ್ ನ ಸೆನೆಟರ್ ಜಾನ್ ಕಾರ್ನಿನ್ ಅವರ ಪತ್ನಿ ಸ್ಯಾಂಡಿ ಅವರ ಬಳಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೆಳಿದ್ದಾರೆ. ಹಾಗಾದರೆ ನಿಜಕ್ಕೂ ಅಮೇರಿಕಾದಲ್ಲಿ ಆಗಿದ್ದೇನು. ಮುಂದೆ ಓದಿ.

ರವಿವಾರ ಸೆನೆಟರ್ ಜಾನ್ ಕಾರ್ನಿನ್ ಅವರ ಪತ್ನಿ ಸ್ಯಾಂಡಿ ಅವರ ಹುಟ್ಟಿದ ದಿನ. ಪತ್ನಿಯ ಹುಟ್ಟಿದ ಹಬ್ಬವನ್ನು ಆಚರಿಸದೇ ಜಾನ್ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರಣಕ್ಕೆ ಮೋದಿ ಸ್ಯಾಂಡಿ ಅವರ ಕ್ಷಮೆ ಕೇಳಿರುವುದು.

ನಿಮ್ಮ ಹುಟ್ಟುಹಬ್ಬದ ದಿನ ನಿಮ್ಮ ಪತಿ ನನ್ನ ಜೊತೆಯಿದ್ದರು. ಸಹಜವಾಗಿಯೇ ನಿಮಗೆ ಇದರಿಂದ ಅಸೂಯೆಯಾಗಿರಬಹುದು. ಇದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನಿಮ್ಮ ಜೀವನ ಚೆನ್ನಾಗಿರಲಿ. ಆಲ್ ದಿ ಬೆಸ್ಟ್ ಎಂದು ನರೇಂದ್ರ ಮೋದಿಯವರು ವಿಡಿಯೋ ಮೂಲಕ ಸ್ಯಾಂಡಿಯವರಿಗೆ ಸಂದೇಶ ಕಳುಹಿಸಿದರು.

Comments are closed.